WATCH : ‘ಕೆಜಿಎಫ್’ ಟ್ರೇಲರ್ – ‘ರಾಕಿ’ ಪಾತ್ರದಲ್ಲಿ ಯಶ್ ಅಭಿನಯದ ಝಲಕ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್’ ಚಿತ್ರದ ಟ್ರೇಲರ್ ಅನ್ನು ನಟ ಅಂಬರೀಷ್ ಲಾಂಚ್ ಮಾಡಿದ್ದಾರೆ. ಕೆಜಿಎಫ್ ಚಿತ್ರಕ್ಕೆ ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಗಳು ಮೂಡಿಸಿವೆ. ಪಂಚ ಭಾಷೆಯಲ್ಲಿ ಡಿಸೆಂಬರ್ 21ಕ್ಕೆ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಯಶ್ ‘ರಾಕಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅದರ ಒಂದು ಸಣ್ಣ ಝಲಕ್ ಟ್ರೇಲರ್ ನಲ್ಲಿ ನೋಡಬಹುದಾಗಿದೆ.

ಟ್ರೇಲರ್ ಲಾಂಚ್ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ ಅಂಬರೀಶ್, ‘ನೀವು ನಾವು ಕಂಡ ಹಾಗೆ ಯಾವುದೇ ಚಿತ್ರದ ಟ್ರೇಲರ್ ಆಗಲಿ, ಬಿಡುಗಡೆಯಾಗಲಿ, ಅಲ್ಲಿಗೆ ಬರೋದು ಕೆಲವೇ ಜನರು ಮಾತ್ರ. ಈ ಚಿತ್ರದ ವೈಶಿಷ್ಟತೆ ಏನಪ್ಪ ಅಂದ್ರೆ, ಕೆಜಿಎಫ್ ಕರ್ನಾಟಕದಲ್ಲಿ ಮಾತ್ರ ಹುಟ್ಟುವುದಿಲ್ಲ. ಇಡೀ ಪ್ರಪಂಚದಲ್ಲೇ ಹುಟ್ಟುತ್ತೆ ಅನ್ನೋದು ನನ್ನ ಆಸೆ. ಈ ತಂಡಕ್ಕೆ ಶುಭ ಹಾರೈಸುತ್ತೇನೆ. ನನ್ನ ಚಿತ್ರರಂಗದ ಜೀವನದಲ್ಲಿ ಅದೆಷ್ಟೋ ಟೈಟಲ್​​ಗಳನ್ನ ನೋಡಿದ್ದೇನೆ. ಪ್ರತಿಯೊಂದು ಚಿತ್ರದ ಟೈಟಲ್​ಗೂ ಅದರದ್ದೇ ಆದ ಅರ್ಥ ಇರುತ್ತೆ. ಆದರೆ ಕೆಜಿಎಫ್ ಸ್ವಲ್ಪ ಭಿನ್ನವಾಗಿದೆ. ಯಾಕಂದ್ರೆ ಕೆಜಿಎಫ್ ಅಂದಾಕ್ಷಣ ನಮ್ಮ ಕಣ್ಣ ಮುಂದೆ ಬರೋದು ಕೋಲಾರದ ಕೆಜಿಎಫ್ ಗೌಡರು. ಆದರೆ ಚಿತ್ರದ ಟ್ರೇಲರ್ ನೋಡಿದಾಗಲೇ ನನಗೆ ಆಶ್ಚರ್ಯವಾಯಿತು. ಟ್ರೇಲರ್ ತೀವ್ರ ಕುತೂಹಲ ಸೃಷ್ಟಿಸುತ್ತಿದೆ ‘ ಎಂದರು.

ಯಶ್ ಅವರ ಶ್ರಮ, ಅವರ ತಂಡದ ಪರಿಶ್ರಮಕ್ಕೆ ಶುಭವಾಗಲಿ. ಈ ವೇಳೆ ಐದು ಭಾಷೆಯ ಎಲ್ಲಾ ಮಹನೀಯರೂ ಬಂದಿದ್ದಾರೆ. ದೇಶದ ದೊಡ್ಡ ದೊಡ್ಡ ಸಂಸ್ಥೆಗಳು ಚಿತ್ರವನ್ನ ಕೊಂಡುಕೊಳ್ಳಲು ಮುಂದೆ ಬಂದು ನಮ್ಮ ಯಶ್ ತಂಡಕ್ಕೆ ಸಹಾಯ ಮಾಡಿದ್ದಾರೆ. ನನಗೆ ತುಂಬಾ ಖುಷಿ ಆಗುತ್ತಿದೆ. ಇಂಥ ದೊಡ್ಡ ಸಿನಿಮಾವನ್ನ ನಮ್ಮ ಯಶ್ ಪರದೇ ಮೇಲೆ ಬಿಡುಗಡೆ ಮಾಡುತ್ತಿದ್ದಾರೆ ಅನ್ನೋದೇ ಸಂತೋಷ ‘ ಎಂದರು.

‘ಕೆಜಿಎಫ್’ ಚಿತ್ರದ ಹಿಂದಿ ಟ್ರೇಲರ್ ಶುಕ್ರವಾರ ಬಿಡುಗಡೆಗೊಂಡಿದೆ. ಡಿಸೆಂಬರ್ 21ರಂದು ಐದು ಭಾಷೆಗಳಲ್ಲಿ ‘ಕೆಜಿಎಫ್’ ತೆರೆ ಕಾಣುತ್ತಿದ್ದು, ಹಿಂದಿ ಭಾಷೆಯಲ್ಲಿ ‘ಕೆಜಿಎಫ್’ ಚಿತ್ರದ ಡಿಸ್ಟ್ರಿಬ್ಯೂಟರ್ ಆಗಿರುವ ಬಾಲಿವುಡ್ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಟ್ರೇಲರ್ ರಿಲೀಸ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com