WATCH : ‘ಸ್ವಿಚ್ ಬೌಲಿಂಗ್ ಆ್ಯಕ್ಷನ್’ – ನೀವು ಹಿಂದೆಂದೂ ಕಂಡಿರದ ವಿಚಿತ್ರ ಶೈಲಿಯಿದು..!

ಕ್ರಿಕೆಟ್ ಅಂಗಳದಲ್ಲಿ ಬ್ಯಾಟ್ಸಮನ್ ಗಳು ಎಂತೆಂತಹದೋ ಚಿತ್ರ ವಿಚಿತ್ರ ಶಾಟ್ ಗಳನ್ನು ಹೊಡೆಯುವುದನ್ನು ನೋಡಿರುತ್ತೀರಿ. ತಿಲಕರತ್ನೆ ಡಿಲ್ಶಾನ್ ದಿಲ್ ಸ್ಕೂಪ್, ಕೆವಿನ್ ಪೀಟರ್ಸನ್ ಸ್ವಿಚ್ ಹಿಟ್, ಧೋನಿಯ ಹೆಲಿಕಾಪ್ಟರ್ ಶಾಟ್, ಎಬಿ ಡಿವಿಲಿಯರ್ಸ್ 360 ಡಿಗ್ರೀ ಶಾಟ್ ಹೀಗೆ ನಾನಾ ಬಗೆಯ ಹೊಡೆತಗಳಿವೆ.

ಇಂಗ್ಲೆಂಡಿನ ಸ್ಫೋಟಕ ಬ್ಯಾಟ್ಸಮನ್ ಕೆವಿನ್ ಪೀಟರ್ಸನ್ ‘ಸ್ವಿಚ್ ಹಿಟ್’ ಬಾರಿಸುವುದನ್ನು ನೀವು ನೋಡಿರುತ್ತೀರಿ. ಈಗ ‘ಸ್ವಿಚ್ ಬೌಲಿಂಗ್ ಶೈಲಿ’ ನೋಡುವ ಸಮಯ ಬಂದಿದೆ.

ಬಿಸಿಸಿಐ ತನ್ನ ಫೇಸ್ಪುಕ್ ಪೇಜ್ ನಲ್ಲಿ ವಿಚಿತ್ರ ಬೌಲಿಂಗ್ ಶೈಲಿಯ ವಿಡಿಯೋ ಪೋಸ್ಟ್ ಮಾಡಿದೆ. ಚೆಂಡನ್ನು ಎಸೆಯುವದಕ್ಕೂ ಮುನ್ನ ಬೌಲರ್ ತನ್ನ, ರನ್ ಅಪ್ ವೇಳೆ ಸಂಪೂರ್ಣ 360 ಡಿಗ್ರೀ ತಿರುಗುವುದನ್ನು ಕಾಣಬಹುದಾಗಿದೆ. ಅಂಪೈರ್ ಇದನ್ನು ಡೆಡ್ ಬಾಲ್ ಎಂದು ಘೋಷಿಸಿದ್ದಾರೆ. ಇಂಟರ್ನೆಟ್ ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com