ಹುಷಾರು, ಆನ್‌ಲೈನ್‌ ಕ್ಯಾಶ್‌ಬ್ಯಾಕ್‌ಗೆ ಮರುಳಾಗಬೇಡಿ, ಬೀಳುತ್ತೆ ತೆರಿಗೆ..!

ಹಬ್ಬಗಳ ಸಮಯ ಬಂತೆಂದರೆ ಆನ್‌ಲೈನ್‌ ತಾಣಗಳಲ್ಲಿ ಕ್ಯಾಶ್‌ಬ್ಯಾಕ್ ಆಫರ್‌ಗಳ ಸುಗ್ಗಿ ಶುರು. ಸುಖಾಸುಮ್ಮನೆ ಬರೋ ದುಡ್ಡು ಬಿಡೋದ್ಯಾಕೆ ಅಂತ ಆ ರೀತಿಯ ಆಫರ್‌ಗಳಿಗೆ ಮರುಳಾಗುವ ಮಂದಿಯೇ ಹೆಚ್ಚು. ನೀವು ಮುಂದಿನ ಬಾರಿ ಕ್ಯಾಶ್‌ಬ್ಯಾಕ್ ಆಫರ್‌ ಪಡೆಯುವ ಮುನ್ನ ಈ ಸುದ್ದಿ ಓದಿ.

ಉಡುಗೊರೆ ಅಥವಾ ಕ್ಯಾಶ್‌ಬ್ಯಾಕ್ ರೂಪದಲ್ಲಿ ಸಂಬಂಧಿತರಲ್ಲದವರಿಂದ ಬರುವ ಯಾವುದೇ ರೀತಿಯ ಆರ್ಥಿಕ ಲಾಭವನ್ನು ಆದಾಯ ತೆರಿಗೆ ಇಲಾಖೆಯು ಆದಾಯವೆಂದೇ ಪರಿಗಣಿಸುತ್ತದೆ. ಹೀಗೆ ಬಂದ ಆದಾಯಗಳನ್ನು ಬೇರೆ ಮೂಲಗಳಿಂದ ಬಂದ ಅದಾಯ ಅಥವಾ ಉದ್ಯಮ/ಉದ್ಯೋಗದಿಂದ ಬಂದ ಆದಾಯ ಮತ್ತು ಲಾಭ ಎಂಬ ಶೀರ್ಷಿಕೆಯಡಿ ನಮೂದಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 56(2)(ಎಕ್ಸ್) ಪ್ರಕಾರ ಇಂಥ ಆದಾಯಗಳಿಗೆ ಗಿಫ್ಟ್ ಟ್ಯಾಕ್ಸ್ (ಉಡುಗೊರೆ ತೆರಿಗೆ) ವಿಧಿಸಲಾಗುತ್ತದೆ.

ಶರ್ಮಾ ಎಂಬವರು ತಮ್ಮ ಹೊಸಮನೆಗೆ ಕಳೆದವರ್ಷ ಕ್ಯಾಶ್‌ಬ್ಯಾಕ್ ಆಫರ್ ಮೇರೆಗೆ ಟಿವಿ, ಫ್ರಿಜ್ ಮುಂತಾದ ಗೃಹೋಪಯೋಗಿ ಹೊಸವಸ್ತುಗಳನ್ನು ಖರೀದಿಸಿದ್ದರು. ಅದರಿಂದ ಬಂದ ಕ್ಯಾಶ್‌ಬ್ಯಾಕ್ ಮೊತ್ತವನ್ನು ಐಟಿ ರಿಟರ್ನ್ ವೇಳೆ ಅವರು ನಮೂದಿಸದೇ ಇರುವುದನ್ನು ಇಲಾಖೆ ಪ್ರಶ್ನಿಸಿದೆ. ಹೀಗಾಗಿ ಕ್ಯಾಶ್‌ಬ್ಯಾಕ್ ಆಫರ್ ಖರೀದಿಯಿಂದ ಬಂದ ಲಾಭಕ್ಕೂ ತೆರಿಗೆ ಬೀಳಲಿದೆ ಎಂಬುದು ಬಹಿರಂಗವಾಗಿದೆ.

Leave a Reply

Your email address will not be published.