ಛತ್ತೀಸ್‍ಗಢ : ಮಾವೋವಾದಿಗಳಿಂದ ಬಾಂಬ್ ದಾಳಿ – ಓರ್ವ ಯೋಧ ಸೇರಿ ಐವರ ದುರ್ಮರಣ

ಛತ್ತೀಸ್ಗಢ ರಾಜ್ಯದ ದಂತೆವಾಡಾ ಜಿಲ್ಲೆಯಲ್ಲಿ ಗುರುವಾರ ಮಾವೋವಾದಿಗಳು ನಡೆಸಿದ ಬಾಂಬ್ ದಾಳಿಯಲ್ಲಿ ಓರ್ವ ಯೋಧ ಹಾಗೂ ನಾಲ್ವರು ನಾಗರಿಕರು ದುರ್ಮರಣ ಹೊಂದಿದ್ದಾರೆ. ದಂತೆವಾಡಾ ಜಿಲ್ಲೆಯ ಬಚೇಲಿ ಗುಡ್ಡಗಾಡು ಪ್ರದೇಶದಲ್ಲಿ ಸೈನಿಕರು ಬಸ್ಸೊಂದರಲ್ಲಿ ವಾಪಸಾಗುತ್ತಿದ್ದ ವೇಳೆ ಐಇಡಿ ಬಾಂಬ್ ಸ್ಫೋಟಗೊಂಡಿದೆ.

‘ ಸಿಐಎಸ್ಎಫ್ (CISF) ಪಡೆಯ ಓರ್ವ ಯೋಧ ಹಾಗೂ ನಾಲ್ವರು ನಾಗರಿಕರು ಸಾವಿಗೀಡಾಗಿದ್ದಾರೆ. ಮೃತಪಟ್ಟವರಲ್ಲಿ ಬಸ್ ಚಾಲಕ, ನಿರ್ವಾಹಕ ಹಾಗೂ ಕ್ಲೀನರ್ ಸೇರಿದ್ದಾರೆ ‘ ಎಂದು ಪೋಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಕ್ಷಣಾ ಪಡೆಗಳು ಕೃತ್ಯ ಎಸಗಿದ ಮಾವೋವಾದಿಗಳಿಗಾಗಿ ಸ್ಥಳದಲ್ಲಿ ಶೋಧಕಾರ್ಯ ಆರಂಭಿಸಿದ್ದಾರೆ.

ಛತ್ತೀಸ್ಗಢ ರಾಜ್ಯದಲ್ಲಿ ನವೆಂಬರ್ 12 ಹಾಗೂ 20 ರಂದು ಎರಡು ಹಂತದ ವಿಧಾನಸಭೆ ಚುನಾವಣೆಗಳು ನಡೆಯಬೇಕಿದ್ದು, ಕೆಲವೇ ದಿನಗಳ ಮುನ್ನ ಈ ಸ್ಫೋಟ ಸಂಭವಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com