3 ವರ್ಷದ ಮಗುವಿನ ಬಾಯಲ್ಲಿ ಪಟಾಕಿ ಇಟ್ಟು ಹೊಡೆದ ಕಿರಾತಕ : ಬಾಲೆಯ ಸ್ಥಿತಿ ಗಂಭೀರ

ಬೆಳಕಿನ ಹಬ್ಬ ದೀಪಾವಳಿ ಇಲ್ಲೊಂದು ಎಳೆಯ ಮಗುವಿನ ಬದುಕಿಗೇ ಸಂಚಕಾರ ತಂದಿದೆ. ಕಿಡಿಗೇಡಿಯೊಬ್ಬನ ಕುಚೇಷ್ಟೆ ಈಕೆಯನ್ನು ಜೀವನ್ಮರಣ ಹೋರಾಟ ನಡೆಸುವಂತೆ ಮಾಡಿದೆ.

ಉತ್ತರಪ್ರದೇಶದ ಮೀರತ್‌ನಲ್ಲಿ ದೀಪಾವಳಿಯಂದು ಸಂಜೆ ವ್ಯಕ್ತಿಯೊಬ್ಬ ಮೂರು ವರ್ಷದ ಎಳೆಯ ಮಗುವಿನ ಬಾಯಲ್ಲಿ ಪಟಾಕಿ ಇಟ್ಟು ಹೊಡೆದ ಪರಿಣಾಮ ಆಕೆ ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಮಿಲಕ್ ಗ್ರಾಮದ ದೌರಾಲಾ ರಸ್ತೆಯಲ್ಲಿ ಬುಧವಾರ ಈ ಆತಂಕಕಾರಿ ವಿದ್ಯಮಾನ ಜರುಗಿದೆ.

ಮಗಳು ಮನೆಯೆದುರು ಆಟವಾಡುತ್ತಿದ್ದಳು. ಆಗ ನೆರೆಯ ಯುವಕ ಹರ್ಪಾಲ್ ಎಂಬುವವನು ಸುಟ್ಲಿ ಬಾಂಬ್ (ಬಾಂಬ್ ಪಟಾಕಿ) ಅನ್ನು ಆಕೆಯ ಬಾಯಲ್ಲಿ ಇಟ್ಟು ಬೆಂಕಿ ಹಚ್ಚಿದ. ಬಾಯಲ್ಲೇ ಬಾಂಬ್ ಸ್ಫೋಟಗೊಂಡಿತು ಎಂದು ಬಾಲಕಿಯ ತಂದೆ ಶಶಿ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಲಕಿಯ ಬಾಯಿ, ಗಂಟಲು ತೀವ್ರವಾಗಿ ಸುಟ್ಟುಹೋಗಿದೆ.50 ಹೊಲಿಗೆ ಹಾಕಲಾಗಿದೆ. ಗಂಟಲಿಗೆ ಸೋಂಕು ಉಂಟಾಗಿದೆ. ಆಕೆಯ ಆರೋಗ್ಯ ಸ್ಥಿತಿ ಇನ್ನೂ ವಿಷಮವಾಗಿಯೇ ಎಂದು ವೈದ್ಯರು ಹೇಳಿದ್ದಾರೆ. ಕಿಡಿಗೇಡ್ ಹರ್ಪಾಲ್ ನಾಪತ್ತೆಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com