ಮಾಲ್ಡೀವ್ಸ್ ನಲ್ಲಿ ಸಿದ್ಧವಾಗಿದೆ ವಿಶ್ವದ ಮೊತ್ತಮೊದಲ ಸಮುದ್ರದಡಿಯ ವಿಲ್ಲಾ..!

ಪ್ರವಾಸಿಗರ ಸ್ವರ್ಗವೆನಿಸಿಕೊಂಡಿರುವ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ನಲ್ಲಿ ವಿಶ್ವದಲ್ಲೇ ಮೊತ್ತಮೊದಲ ಸಮುದ್ರದಡಿಯ ವಿಲ್ಲಾ ತಲೆ ಎತ್ತಿದೆ. ಕನ್ರಾಡ್ ಮಾಲ್ಡೀವ್ಸ್ ರಂಗಲಿ ದ್ವೀಪದಲ್ಲಿ ಲಕ್ಷುರಿ ಹೊಟೇಲ್ ಒಂದರಲ್ಲಿ ಈ ನೀರಿನಡಿಯ ವಿಲ್ಲಾ ಸ್ಥಾಪಿಸಲಾಗಿದೆ. ಇದರಲ್ಲಿ ಅತಿಥಿಗಳು ಮೀನುಗಳ ಜತೆಯಲ್ಲಿ ಸುಖವಾಗಿ ಮಲಗಬಹುದು. ಅಷ್ಟೇ ಅಲ್ಲ, ನೀರಿನೊಳಗೇ ಕುಳಿತು ಸಮುದ್ರ ಜೀವನವನ್ನು, ಜಲಚರಗಳ ಬದುಕನ್ನು ನೋಡಬಹುದು. ಈ ವಿಲ್ಲಾದಲ್ಲಿ ಒಂದು ಬೆಡ್‌ರೂಂ, ಲಿವಿಂಗ್ ಏರಿಯಾ, ಬಾತ್ ರೂಂ, ಜಿಮ್, ಹುಲ್ಲುಗಾವಲು ಪ್ರದೇಶವಿದೆ.

Image result for undersea villa maldives first ever

Image result for undersea villa maldives first ever

ಮೇಲುಗಡೆಯಿರುವ ಸ್ಟಾರ್ ಹೊಟೇಲ್‌ನಿಂದ ನೀರಿನಡಿಯಲ್ಲಿರುವ ಈ ವಿಲ್ಲಾಕ್ಕೆ ಹೋಗಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. 9 ಜನರಿಗೆ ವಾಸ್ತವ್ಯ ಮಾಡುವಷ್ಟು ದೊಡ್ಡದಾಗಿದೆ ಈ ವಿಲ್ಲಾ. ಇಷ್ಟೆಲ್ಲಾ ಓದಿದ ಮೇಲೆ ಒಂದು ರಾತ್ರಿಯಾದರೂ ಅಲ್ಲಿ ವಾಸಮಾಡಬೇಕು ಎಂದ ಆಸೆ ಬಂತಾ? ಮತ್ಯಾಕೆ ತಡ? ಬ್ಯಾಗ್ ತೆಗೆದುಕೊಂಡು ಹೊರಡಿ. ಆದರೆ ನೆನಪಿಡಿ, ಅಲ್ಲಿ ಒಂದು ರಾತ್ರಿಗೆ ಕೇವಲ 36.6 ಲಕ್ಷ ರೂ. ದರ ತೆರಬೇಕಾಗುತ್ತದೆ!  ನ್ಯೂಜಿಲ್ಯಾಂಡ್‌ ಮೂಲದ ಎಂಜೆ ಮರ್ಫಿ ಲಿಮಿಟೆಡ್ ಕಂಪನಿ ಈ ವಿನೂತನ ಪರಿಕಲ್ಪನೆಯ ವಿಲ್ಲಾವನ್ನು ನಿರ್ಮಿಸಿದೆ. ಇದರ ನಿರ್ಮಾಣಕ್ಕೆ 1.5 ಕೋಟಿ ಡಾಲರ್ ವೆಚ್ಚವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com