ರೇವಣ್ಣರನ್ನು ಹೊಗಳಿದ ವಿಚಾರ : ಸಚಿವೆ ಜಯಮಾಲಾ ಕೈ ಕಾರ್ಯಕರ್ತರ ಕ್ಷಮೆ ಕೇಳಲಿ – ಎ.ಮಂಜು ಆಗ್ರಹ

ಹಾಸನ : ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಅವರನ್ನ ಹೊಗಳಿದ ಹಿನ್ನೆಲೆಯಲ್ಲಿ ಸಚಿವೆ ಜಯಮಾಲಾ ಅವರು ಹಾಸನ ಕಾಂಗ್ರೆಸ್ ಕಾರ್ಯಕರ್ತರ ಬಳಿ ಕ್ಷಮೆಯಾಚಿಸಬೇಕು ಎಂದು ಮಾಜಿ ಸಚಿವ ಎ.ಮಂಜು ಆಗ್ರಹಿಸಿದ್ದಾರೆ.

ಜಯಮಾಲಾ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಎ.ಮಂಜು, ‘ ಜಯಮಾಲಾ ಅವರು ಕಾಂಗ್ರೆಸ್ ಪಕ್ಷಕ್ಕೆ ಮುಜಗರ ತರುವಂತೆ ಹೇಳಿಕೆ ನೀಡಿದ್ದಾರೆ. ಅನುಭವ ಇಲ್ಲದವರಿಗೆ ಅಧಿಕಾರ ನೀಡಿದರೇ ಹೀಗೆಯೇ ಆಗುವುದು. ಯಾರದ್ದೋ ಓಲೈಕೆಗಾಗಿ ಅವರು ಈ ಹೇಳಿಕೆ ನೀಡಿದ್ದಾರೆ. ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಇಂತಹ ಹೇಳಿಕೆ ನೀಡಿದ್ದಾರೆ ‘ ಎಂದು ಕಿಡಿಕಾರಿದ್ದಾರೆ.

‘ ಜಯಮಾಲಾ ಅವರು ಸಾಯವವರೆಗೂ ಹಿರೋಯಿನ್ ಎಂದುಕೊಂಡಿದ್ದರು. ಆದರೆ ಯಾರೂ ನೋಡುವವರಿಲ್ಲವೆಂದು ರಾಜಕೀಯಕ್ಕೆ ಬಂದಿದ್ದಾರೆ. ಚಿತ್ರರಂಗದಲ್ಲಿ ದುಡ್ಡು ಮಾಡಿ ರಾಜಕೀಯಕ್ಕೆ ಬಂದಿದ್ದಾರೆ. ಸಚಿವ ರೇವಣ್ಣರನ್ನ ಹೊಗಳಿದ ಕುರಿತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅವರು ಕ್ಷಮೆ ಕೇಳಬೇಕು ‘ ಎಂದು ಮಾಜಿ ಸಚಿವ ಎ.ಮಂಜು ಒತ್ತಾಯಿಸಿದರು.

ರವಿವಾರ ಶ್ರವಣಬೆಳಗೊಳದ ಚಾವುಂಡರಾಯ ಸಭಾ ಮಂಟಪದಲ್ಲಿ ಮುನಿ ಚಾರುಕೀರ್ತ ಭಟ್ಟಾರ ಸ್ವಾಮಿಗಳಿಗೆ ಭಗವಾನ್ ಮಹಾವೀರ ಶಾಂತಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ್ದ ಸಚಿವೆ ಜಯಮಾಲಾ ‘ ಹಾಸನದ ಅಭಿವೃದ್ಧಿ ಕಾರ್ಯ, ಶುಚಿತ್ವ ನೋಡಿದರೆ ಗೊತ್ತಾಗುತ್ತದೆ. ಸಚಿವ ಎಚ್.ಡಿ ರೇವಣ್ಣ ಜನರಿಗೆ ಬೇಕಾದ ಕೆಲಸ ಮಾಡುತ್ತಾರೆ. ಜನರಿಗೆ ಬೇಕಾದ ಕೆಲಸ ಮಾಡಿ ತಮ್ಮ ಸಾಮ್ರಾಜ್ಯ ಕಟ್ಟಿದ್ದಾರೆ. ಸರ್ಕಾರ ಯಾವುದೇ ಇದ್ದರೂ ತಮ್ಮ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತಾರೆ. ಮಹಿಳೆ, ಮಕ್ಕಳ ಬಗ್ಗೆ ರೇವಣ್ಣನವರಿಗೆ ವಿಶೇಷ ಅನುಭೂತಿ ಇದೆ ‘ ಎಂದು ಪ್ರಶಂಸಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com