ಸಚಿನ್-ವಿರಾಟ್ ಮಧ್ಯೆ ಹೋಲಿಕೆ ಬೇಡ : ಕೊಹ್ಲಿ ಬಾಲ್ಯದ ಕೋಚ್ ಹೀಗೆ ಹೇಳಿದ್ದೇಕೆ..?

ಕಪಿಲ್ ದೇವ್-ಇಮ್ರಾನ್ ಖಾನ್, ಸಚಿನ್ ತೆಂಡೂಲ್ಕರ್-ಬ್ರಿಯಾನ್ ಲಾರಾ, ಮುತ್ತಯ್ಯ ಮುರಳಿಧರನ್-ಶೇನ್ ವಾರ್ನ್ ಹೀಗೆ ಕ್ರಿಕೆಟ್ ಲೋಕದ ದಿಗ್ಗಜ ಆಟಗಾರರ ನಡುವೆ ಹೋಲಿಕೆ ಮಾಡುವ ರೂಢಿ ಕ್ರಿಕೆಟ್ ಜಗತ್ತಿನಲ್ಲಿ ಮೊದಲಿನಿಂದಲೂ ಇದೆ. ಆಧುನಿಕ ಕ್ರಿಕೆಟ್ ನಲ್ಲಿ ‘ಕಿಂಗ್ ಕೊಹ್ಲಿ’ ಎಂದೇ ಖ್ಯಾತರಾಗುತ್ತಿರುವ ವಿರಾಟ್ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ಮಧ್ಯೆ ಆಗಾಗ ಹೋಲಿಕೆ ನಡೆದೇ ಇರುತ್ತದೆ.

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್ ರಾಜಕುಮಾರ್ ಶರ್ಮಾ ‘ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಮಧ್ಯೆ ಹೋಲಿಕೆ ಮಾಡುವುದು ಬೇಡ ‘ ಎಂದು ಹೇಳಿದ್ದಾರೆ.

ಮಾಧ್ಯಮಗಳೆದುರು ಮಾತನಾಡಿದ ರಾಜಕುಮಾರ್ ಶರ್ಮಾ ‘ ನಾನು ಯಾವುದೇ ಹೋಲಿಕೆ ಮಾಡಲು ಬಯುಸುವುದಿಲ್ಲ, ಸಚಿನ್ ಒಬ್ಬ ಶ್ರೇಷ್ಟ ಬ್ಯಾಟ್ಸಮನ್ ಹಾಗೂ ತಮ್ಮ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ಹೊಂದಿದ್ದಾರೆ. ಆದರೆ ಮೂರು ಮಾದರಿಯ ಕ್ರಿಕೆಟ್ ನಲ್ಲಿ ವಿರಾಟ್ ತೋರಿದ ಸ್ಥಿರ ಪ್ರದರ್ಶನ ದೊಡ್ಡ ಸಾಧನೆಯಾಗಿದೆ. ಸಚಿನ್ ತೆಂಡೂಲ್ಕರ್, ಕೊಹ್ಲಿಯ ಐಡಲ್ ಆಗಿದ್ದರು. ಸಚಿನ್ ಮತ್ತು ಕೊಹ್ಲಿ ಇಬ್ಬರೂ ಬೇರೆ ಬೇರೆ ಕಾಲಘಟ್ಟದಲ್ಲಿ ಆಡುತ್ತಿರುವುದರಿಂದ ಅವರಿಬ್ಬರ ಮಧ್ಯೆ ಹೋಲಿಕೆ ಮಾಡಲು ಸಾಧ್ಯವಿಲ್ಲ ‘ ಎಂದಿದ್ದಾರೆ.

Leave a Reply

Your email address will not be published.