ಕೊಹ್ಲಿಗೆ 7ನೇ ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ – ಗಂಗೂಲಿ, ಯುವಿ ದಾಖಲೆ ಸರಿಗಟ್ಟಿದ ವಿರಾಟ್

ತಿರುವನಂತಪುರಂನಲ್ಲಿ ನಡೆದ 5ನೇ ಏಕದಿನ ಪಂದ್ಯದಲ್ಲಿ ವೆಸ್ಟ್ಇಂಡೀಸ್ ತಂಡವನ್ನು 9 ವಿಕೆಟ್ ಗಳಿಂದ ಬಗ್ಗುಬಡಿದ ಭಾರತ 3-1 ರಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಸರಣಿಯ ಮೊದಲ ಮೂರು ಏಕದಿನ ಪಂದ್ಯಗಳಲ್ಲಿ ಸತತ 3 ಶತಕಗಳನ್ನು ಸಿಡಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸರಣಿಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

ಇದು ವಿರಾಟ್ ಕೊಹ್ಲಿ ಪಡೆದ 7ನೇ ಸರಣಿಶ್ರೇಷ್ಟ ಪ್ರಶಸ್ತಿಯಾಗಿದೆ. ಈ ಮೂಲಕ ಅತಿ ಹೆಚ್ಚು ಬಾರಿ ಸರಣಿಶ್ರೇಷ್ಟ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿಯಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಯುವರಾಜ್ ಸಿಂಗ್ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ 15 ಸರಣಿಶ್ರೇಷ್ಟ ಪ್ರಶಸ್ತಿಗಳೊಂದಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಸರಣಿಶ್ರೇಷ್ಟ ಪ್ರಶಸ್ತಿಗೆ ಭಾಜನರಾದ ಆಟಗಾರರ ಟಾಪ್ -10 ಲಿಸ್ಟ್ ಇಲ್ಲಿದೆ. 1) ಸಚಿನ್ ತೆಂಡೂಲ್ಕರ್ (15), ಸನತ್ ಜಯಸೂರ್ಯ (11), ಶಾನ್ ಪೊಲಾಕ್ (7), ವಿವ್ ರಿಚರ್ಡ್ಸ್ (7), ಹಾಶಿಮ್ ಆಮ್ಲ (7), ವಿರಾಟ್ ಕೊಹ್ಲಿ (7), ಕ್ರಿಸ್ ಗೇಯ್ಲ್ (7), ಯುವರಾಜ್ ಸಿಂಗ್ (7), ಸೌರವ್ ಗಂಗೂಲಿ (7), ರಿಕಿ ಪಾಂಟಿಂಗ್ (7).

Leave a Reply

Your email address will not be published.

Social Media Auto Publish Powered By : XYZScripts.com