ಮಿ ಟು ಅಬ್ಬರದ ಮಧ್ಯೆ ಕೇಳದಾಯಿತು ಹತ್ಯೆಗೀಡಾದ ದಲಿತ ಬಾಲೆಯ ಕುಟುಂಬದ ರೋದನ

ಅಕ್ಟೋಬರ್ 22ರಂದು ತಮಿಳುನಾಡಿನಲ್ಲಿ ಅಮಾನವೀಯ ಕ್ರೂರ ಘಟನೆಯೊಂದು ನಡೆದು ಹೋಯಿತು. ಸೇಲಂನಿಂದ ಹೊರವಲಯದ ಥಲವಿಯಪಟ್ಟಿ ಗ್ರಾಮದಲ್ಲಿ ಬಲಿಷ್ಠ ಸಮುದಾಯದ ದಿನೇಶ್ ಕುಮಾರ್ ಎಂಬ ವ್ಯಕ್ತಿ ತನ್ನ ನೆರೆಯ 13 ವರ್ಷದ ದಲಿತ ಬಾಲಕಿ ರಾಜಲಕ್ಷ್ಮಿಯ ರುಂಡವನ್ನೇ ಚೆಂಡಾಡಿದ್ದ.


ಇಡೀ ದೇಶವೇ ಮಿ ಟೂ ಅಭಿಯಾನದಲ್ಲಿ ಬ್ಯುಸಿಯಾಗಿದ್ದರೆ, ತಮಿಳುನಾಡು ಮಾತ್ರ ಈ ಕ್ರೌರ್ಯಕ್ಕೆ ಮೌನವಾಗಿತ್ತು. ರಾಜಲಕ್ಷ್ಮಿಯ ಮೇಲೆ ನಡೆದದ್ದು ಕೂಡಾ ಮಿ ಟೂ ಅಪರಾಧವೇ. ದಿನೇಶನ ಲಂಪಟತನಕ್ಕೆ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೇ ಈಕೆ ಕೊಲೆಗೀಡಾಗಿದ್ದಳು.
ರಾಜಲಕ್ಷ್ಮಿಯು ತಾಯಿ ಚಿನ್ನಪೊನ್ನು ಜತೆಗೆ ಹೂ ಕೀಳುತ್ತಿದ್ದಾಗ ಕುಡುಗೋಲಿನೊಂದಿಗೆ ದಿನೇಶ್ ಕುಮಾರ್ ಬಂದಿದ್ದ. ಜಾತಿಯನ್ನು ಗುರಿಯಾಗಿಸಿ ಅವರನ್ನು ಬೈದ ದಿನೇಶ್ ಬಳಿಕ ರಾಜಲಕ್ಷ್ಮಿಯ ಶಿರಚ್ಛೇದಗೈದಿದ್ದ. ಅಷ್ಟೇ ಅಲ್ಲ. ತಾಯಿಯ ಕಣ್ಣೆದುರಲ್ಲೇ ಆ ತಲೆಯನ್ನು ತನ್ನ ಮನೆಗೆ ಕೊಂಡೊಯ್ದಿದ್ದ.


ಮೇಲ್ಜಾತಿ ವ್ಯಕ್ತಿಯಿಂದ ನಡೆದ ಈ ಕ್ರೌರ್ಯದ ವಿರುದ್ಧ ದಲಿತ ಸಂಘಟನೆಗಳ ನಾಯಕರು ಧ್ವನಿಯೆತ್ತತೊಡಗಿದ್ದಾರೆ.
ಇದೊಂದು ಜಾತಿ ಅಪರಾಧ, ಲೈಂಗಿಕ ಅಪರಾಧ. ಇದನ್ನು ಎರಡೂ ಮಟ್ಟದಲ್ಲಿ ನಿಭಾಯಿಸಬೇಕಿದೆ ಎಂದು ದಲಿತರ ಮಾನವ ಹಕ್ಕುಗಳ ಪರವಾಗಿ ಹೋರಾಟ ಮಾಡುವ ಆಂದೋಲನದ ನಿರ್ದೇಶಕರಾದ ಎ. ಕಥೀರ್ ಹೇಳುತ್ತಾರೆ.

Leave a Reply

Your email address will not be published.