Califorina : 800 ಅಡಿ ಆಳಕ್ಕೆ ಬಿದ್ದು ಭಾರತೀಯ ಮೂಲದ ಟೆಕ್ಕಿ ದಂಪತಿ ಸಾವು..!

800 ಅಡಿ ಆಳಕ್ಕೆ ಬಿದ್ದು ಭಾರತೀಯ ಮೂಲದ ಟೆಕ್ಕಿ ದಂಪತಿ ಸಾವನ್ನಪ್ಪಿರುವ ಘಟನೆ ಅಮೇರಿಕದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿರುವ ಯೋಸೆಮಿಟಿ ನ್ಯಾಷನಲ್ ಪಾರ್ಕ್ ನಲ್ಲಿ ನಡೆದಿದೆ. ಅಮೇರಿಕದ ಖ್ಯಾತ ಪ್ರವಾಸೀ ತಾಣವಾಗಿರುವ ಯೋಸೆಮಿಟಿ ನ್ಯಾಷನಲ್ ಪಾರ್ಕ್ ನ ಟ್ಯಾಫ್ಟ್ ಪಾಯಿಂಟ್ ನಿಂದ ಟೆಕ್ಕಿ ದಂಪತಿ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

Image result for yosemite park death indian couple

ರೇಂಜರ್ಸ್ ತಂಡದವರು ಇಬ್ಬರ ಶವಗಳನ್ನು ಪತ್ತೆ ಮಾಡಿದ್ದು, ಮೃತಪಟ್ಟವರನ್ನು 29 ವರ್ಷದ ವಿಷ್ಣು ವಿಶ್ವನಾಥ್ ಹಾಗೂ 30 ವರ್ಷದ ಮೀನಾಕ್ಷಿ ಮೂರ್ತಿ ಎಂದು ಗುರುತಿಸಲಾಗಿದೆ.

Image result for yosemite park death indian couple

ವಿಷ್ಣು ಹಾಗೂ ಮೀನಾಕ್ಷಿ ದಂಪತಿ ಇತ್ತೀಚೆಗಷ್ಟೆ ನ್ಯೂಯಾರ್ಕ್ ನಿಂದ ಸ್ಯಾನ್ ಜೋಸ್ ನಗರಕ್ಕೆ ಶಿಫ್ಟ್ ಆಗಿದ್ದರು. ವಿಷ್ಣು ಸ್ಯಾನ್ ಜೋಸ್ ನಗರದ ಸಿಸ್ಕೊ ಕಂಪನಿಯಲ್ಲಿ ಸಿಸ್ಟಮ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

Image result for yosemite park death indian couple

‘ಹಾಲಿಡೇಸ್ ಆ್ಯಂಡ್ ಹ್ಯಾಪಿಲಿ ಎವರ್ ಆಫ್ಟರ್’ ಎಂಬ ಹೆಸರಿನ ಟ್ರಾವೆಲ್ ಬ್ಲಾಗ್ ಹೊಂದಿದ್ದ ಇವರಿಬ್ಬರು, ತಮ್ಮ ಪ್ರಪಂಚ ಪರ್ಯಟನೆಯ ವಿವರಗಳನ್ನು, ವಿಡಿಯೋಗಳನ್ನು ಅಲ್ಲಿ ದಾಖಲಿಸುತ್ತಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com