ವಾಯು ಮಾಲಿನ್ಯ : ವರ್ಷವೊಂದರಲ್ಲಿ ಭಾರತದಲ್ಲಿ ಸತ್ತ ಮಕ್ಕಳು ಲಕ್ಷಕ್ಕೂ ಹೆಚ್ಚು..!

ವಾಯುಮಾಲಿನ್ಯದ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ಭಾರತದಲ್ಲಿ ಇದು ಆತಂಕಕಾರಿ ಮಟ್ಟದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ನೂತನ ವರದಿ ಇದನ್ನು ಪುಷ್ಟೀಕರಿಸುತ್ತದೆ. ಸದ್ಯ 2016ರ ಅಂಕಿಅಂಶ ಬಿಡುಗಡೆಗೊಂಡಿದ್ದು, ಆ ಒಂದು ವರ್ಷದಲ್ಲಿ ಭಾರತದಲ್ಲಿ ಐದು ವರ್ಷದೊಳಗಿನ ಒಂದು ಲಕ್ಷಕ್ಕೂ ಅಧಿಕ ಮಕ್ಕಳು ಕಲುಷಿತ ವಾತಾವರಣದಿಂದಾಗಿ ಮೃತಪಡುತ್ತಿದ್ದಾರೆ ಎಂಬ ಬೆಚ್ಚಿಬೀಳಿಸುವ ಸಂಗತಿಯನ್ನು ಬಹಿರಂಗಗೊಳಿಸಿದೆ.

Image result for air pollution children death india

ಹೀಗೆ ವಾಯುಮಾಲಿನ್ಯದಿಂದ ಮೃತಪಟ್ಟ ಮಕ್ಕಳಲ್ಲಿ ಶೇ.98ರಷ್ಟು ಮಂದಿ ಮಧ್ಯಮ ಹಾಗೂ ಬಡ ಕುಟುಂಬಕ್ಕೆ ಸೇರಿದವರು ಎಂಬ ಅಂಶವನ್ನು ವರದಿ ಬೊಟ್ಟು ಮಾಡಿದೆ. ವಿಶ್ವಾದ್ಯಂತ 2016ರಲ್ಲಿ 15 ವರ್ಷದೊಳಗಿನ ಸುಮಾರು 6 ಲಕ್ಷ ಮಕ್ಕಳು ಮೃತಪಟ್ಟಿದ್ದು, 18 ವರ್ಷದೊಳಗಿನ ಶೇ.93 ರಷ್ಟು ಮಕ್ಕಳು ಗಾಳಿ‌ ಮಾಲಿನ್ಯದ ಸಮಸ್ಯೆಗೆ ಗುರಿಯಾಗಿದ್ದಾರೆ ಎಂದಿದೆ.

Image result for air pollution children death india
ಗ್ರೀನ್ ಪೀಸ್ ಸಂಸ್ಥೆ ಸಿದ್ಧಪಡಿಸಿರುವ ಇನ್ನೊಂದು ವರದಿಯಲ್ಲಿ, ದೆಹಲಿಯ ಸುತ್ತಮುತ್ತಲಿನ ಎನ್ ಸಿಆರ್ ಭಾಗದಲ್ಲಿ ಉಂಟಾಗುತ್ತಿರುವ ನೈಟ್ರೋಜನ್ ಡೈ ಆಕ್ಸೈಡ್ ನಿಂದ ಓಯೋನ್ ಪದರಕ್ಕೆ ಹೆಚ್ಚು ಹಾನಿಯಾಗುತ್ತಿದೆ. ದೆಹಲಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಐದು ವರ್ಷದೊಳಗಿನ ಮಕ್ಕಳು ಮೃತಪಟ್ಟಿದ್ದು, ಇದರಲ್ಲಿ 60,987 ಮಕ್ಕಳು‌ ವಾಯು ಮಾಲಿನ್ಯದ ಸಮಸ್ಯೆಯಿಂದ ಕೊನೆಯುಸಿರು ಎಳೆದಿದ್ದಾರೆ ಎಂದು ಹೇಳಿದೆ.

Leave a Reply

Your email address will not be published.

Social Media Auto Publish Powered By : XYZScripts.com