ಓಟದ ಮಧ್ಯೆ ಮುರಿಯಿತು ಕಾಲು : ತೆವಳುತ್ತಲೇ ಗುರಿ ತಲುಪಿದ ಧೀರೆ..!

ಕ್ರೀಡೆಯಲ್ಲಿ ಸೋಲು, ಗೆಲವು ಸಹಜವೇ. ಆದರೆ ಒಬ್ಬ ಕ್ರೀಡಾಳುವಿಗೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿದ್ದು ಕ್ರೀಡಾಸ್ಫೂರ್ತಿ. ಜಪಾನಿನ ಓಟಗಾರ್ತಿ ರಿ ಲಿಡಾ ಅವರು ಕ್ರೀಡಾಸ್ಫೂರ್ತಿಗೊಂದು ಅತ್ಯುತ್ತಮ ಉದಾಹರಣೆಯಾಗಿದ್ದಾಳೆ.

19 ವರ್ಷದ ರಿ ಲಿಡಾ ಅವರು ಫುಕುವೋಕಾದಲ್ಲಿ ನಡೆದ ಮ್ಯಾರಾಥಾನಿ ರಿಲೇ ಸ್ಟ್ರೀಟ್ ರೇಸ್‌ನಲ್ಲಿ ಪಾಲ್ಗೊಂಡಿದ್ದರು. ದುರದೃಷ್ಟವಶಾತ್ ಓಟದ ಮುಕ್ಕಾಲು ಭಾಗ ಪೂರ್ಣಗೊಳಿಸುತ್ತಿದ್ದಂತೆ ಆಕೆಯ ಕಾಲು ಮುರಿದು ಟ್ರಾಕ್‌ನಲ್ಲಿ ಕುಸಿದರು.

ಆಕೆಯ ಕಾಲು ಮುರಿದರೂ, ಕ್ರೀಡಾಸ್ಫೂರ್ತಿ ಕುಂದಲಿಲ್ಲ. ಓಟ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಟ್ರಾಕ್‌ನಲ್ಲಿ ತಮ್ಮ ತಂಡದ ಉಳಿದ ಆಟಗಾರ್ತಿಯರು ರಿಲೇ ಬ್ಯಾಟನ್‌ಗಾಗಿ ಕಾಯುತ್ತಿದ್ದರು. ಹೀಗಾಗಿ ಉಳಿದ ದೂರವನ್ನು ತೆವಳುತ್ತಲೇ ಸಾಗಿದಳೀಕೆ. ತನ್ನ ತಂಡದ ಮುಂದಿನ ಸದಸ್ಯೆಗೆ ರಿಲೇಯ ಬ್ಯಾಟನ್ ಹಸ್ತಾಂತರಿಸಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಲಿಡಾಳ ಕಾಲು ಮುರಿದ ಸಂಗತಿ ತಿಳಿದ ತಕ್ಷಣ ತಂಡದ ಮ್ಯಾನೇಜರ್ ಓಟದಿಂದ ತಂಡ ಹಿಂದೆ ಸರಿದಿದೆ ಎಂದು ಘೋಷಿಸಿದ್ದರು. ಆದರೆ ಲಿಡಾಗೆ ಇದು ಗೊತ್ತಾಗಲಿಲ್ಲ. ಆಕೆ ತೆವಳುತ್ತಾ 400 ಅಡಿಗಳಷ್ಟು ದೂರ ಸಾಗಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com