ಕುಲ್ಫಿ ಮಾರಿ ಜೀವನ ಸಾಗಿಸುತ್ತಿರುವ ಅರ್ಜುನ ಪ್ರಶಸ್ತಿ ವಿಜೇತ ಬಾಕ್ಸಿಂಗ್ ಪಟು..!

ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಭಾರತದ ಖ್ಯಾತ ಬಾಕ್ಸಿಂಗ್ ಪಟು ಈಗ ಬೀದಿ ಬದಿಯಲ್ಲಿ ಐಸ್ ಕ್ರೀಮ್ ಮಾರಿ ಜೀವನ ಸಾಗಿಸುತ್ತಿದ್ದಾರೆ. 2010ರಲ್ಲಿ ರಾಷ್ಟ್ರಪತಿಗಳಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದ 30 ವರ್ಷದ ದಿನೇಶ್ ಕುಮಾರ್ ಇಂದು ಹರಿಯಾಣಾದ ಭಿವಾನಿಯಲ್ಲಿ ಕುಲ್ಫಿ ಸ್ ಕ್ರೀಮ್ ಮಾರಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

2014ರಲ್ಲಿ ಸಂಭವಿಸಿದ ಲಾರಿ ಅಪಘಾತದಿಂದಾಗಿ ದಿನೇಶ್ ಕುಮಾರ್ ಅವರ ದೇಶದ ಶ್ರೇಷ್ಟ ಬಾಕ್ಸಿಂಗ್ ಪಟುವಾಗುವ ಕನಸಿಗೆ ಕೊಡಲಿಯೇಟು ಬಿತ್ತು. ಇದೀಗ ವಿಪರೀತ ಸಾಲದ ಹೊರೆಯಿಂದ ಕಷ್ಟ ಪಡುವಂತಾಗಿದ್ದು, ಸಾಲ ತೀರಿಸಲು ದಿನೇಶ್ ಕುಮಾರ್ ಬೀದಿ ಬದಿಯಲ್ಲಿ ಕುಲ್ಫಿ ಐಸ್ ಕ್ರೀಮ್ ಮಾರುತ್ತಿದ್ದಾರೆ.

‘ ಸರ್ಕಾರ ಸೂಕ್ತ ಪರಿಹಾರ ಅಥವಾ ಉದ್ಯೋಗ ಸಿಗಬಹುದೆಂಬ ಭರವಸೆ ನನಗಿಲ್ಲ. ಅಧಿಕಾರದಲ್ಲಿದ್ದ ಯಾವುದೇ ರಾಜಕೀಯ ಪಕ್ಷಗಳೂ ನೆರವು ನೀಡಲು ಮುಂದಾಗಿಲ್ಲ. ಸದ್ಯ ನನ್ನ ಕುಟುಂಬದ ಮೇಲಿರುವ ಸಾಲದ ಹೊರೆಯನ್ನು ಇಳಿಸಿ, ಆನಂತರ ಬಾಕ್ಸಿಂಗ್ ರಿಂಗ್ ಮರಳುವ ಇಚ್ಛೆ ಹೊಂದಿದ್ದೇನೆ ‘ ಎಂದು ದಿನೇಶ್ ಕುಮಾರ್ ತಿಳಿಸಿದ್ದಾರೆ.

ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಅನೇಕ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ದಿನೇಶ್ ಕುಮಾರ್ 17 ಬಂಗಾರ, 1 ಬೆಳ್ಳಿ ಹಾಗೂ 5 ಕಂಚಿನ ಪದಕ ಜಯಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com