ರನ್ ಮಷಿನ್ ಕೊಹ್ಲಿಗೆ ಹೊಸ ಚಾಲೆಂಜ್ ನೀಡಿದ ಪಾಕ್ ವೇಗಿ ಅಖ್ತರ್ – ಏನದು..?

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿನದಿಂದ ದಿನಕ್ಕೆ ಹಳೆಯ ದಾಖಲೆಗಳನ್ನು ಮುರಿದು, ಹೊಸ ರೆಕಾರ್ಡ್ ಗಳನ್ನು ಸೃಷ್ಟಿಸುತ್ತ ಸಾಧನೆಯ ಶಿಖರವನ್ನೇರುತ್ತಿದ್ದಾರೆ. ವೆಸ್ಟ್ಇಂಡೀಸ್ ಹಾಗೂ ಭಾರತದ ನಡುವೆ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಮೂರೂ ಪಂದ್ಯಗಳಲ್ಲಿಯೂ ರನ್ ಮಷಿನ್ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು.

ಅಂತರಾಷ್ಟ್ರೀಯ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಇದುವರೆಗೆ 62 ಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿಗೆ ಪಾಕಿಸ್ತಾನ ವೇಗಿ ಶೋಯೆಬ್ ಅಖ್ತರ್ ಹೊಸ ಚಾಲೆಂಜ್ ನೀಡಿದ್ದಾರೆ.

ಟ್ವೀಟ್ ಮಾಟಿರುವ ಶೋಯೆಬ್ ಅಖ್ತರ್ ‘ ಗುವಾಹಟಿ.. ವಿಶಾಖಪಟ್ಟಣಂ.. ಪುಣೆ.. ಕೊಹ್ಲಿ ಸತತ ಮೂರು ಪಂದ್ಯಗಳಲ್ಲಿ ಶತಕ ಬಾರಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿದ್ದಾರೆ. ವಿರಾಟ್ ಒಬ್ಬ ಗ್ರೇಟ್ ರನ್ ಮಷಿನ್. ಕೀಪ್ ಇಟ್ ಅಪ್.. ಶತಕಗಳ ಸಂಖ್ಯೆ 120 ದಾಟಬೇಕು. ಇದು ನಾನು ಸೆಟ್ ಮಾಡುತ್ತಿರುವ ಟಾರ್ಗೆಟ್ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com