Bollywood : ಚೀನಾದಲ್ಲಿ ಹಿಚ್ಕಿ ಹವಾ : 100 ಕೋಟಿಯತ್ತ ರಾಣಿ ಅಭಿನಯದ ಚಿತ್ರ..

ಚೀನಾದಲ್ಲಿ ರಾಣಿ ಹವಾ ! ಹಿಚ್ಕಿ ಹಿಟ್, 71 ಕೋಟಿ ರೂ.ಗಳಿಗೆ, ನಟಿ ರಾಣಿ ಮುಖರ್ಜಿ ಅಭಿನಯದ ಹಿಚ್ಕಿ ಚೀನಾದಲ್ಲಿ ಭರ್ಜರಿ ಹಿಟ್ ಆಗಿದೆ. ಈ ಸಿನಿಮಾ ಬಿಡುಗಡೆಯಾದ ಐದೇ ದಿನಗಳಲ್ಲಿ ಚೀನಾ ಬಾಕ್ಸ್ ಆಫೀಸ್‍ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದಾಗುತ್ತಿದೆ. ಈಗಾಗಲೇ 9.80 ದಶಲಕ್ಷ ಡಾಲರ್(71.88 ಕೋಟಿ ರೂ.ಗಳು) ಗಳಿಸಿರುವ ಹಿಚ್ಕಿ 100 ಕೋಟಿ ರೂ.ಗಳಿಗೂ ಅಧಿಕ ಲಾಭದ ನಿರೀಕ್ಷೆಯಲ್ಲಿದೆ.

ಚಿತ್ರ ಬಿಡುಗಡೆಗೂ ಮುನ್ನ ಬೀಜಿಂಗ್, ಶಾಂಘೈ ಮೊದಲಾದ ಪ್ರಮುಖ ನಗರಗಳಲ್ಲಿ ರಾಣಿ ಪ್ರಮೋಷನ್ ಮಾಡಿದ್ದರು. ಅದರಂತೆ ಚೀನಿರಿಗೆ ಹಿಚ್ಕಿ ಸಿನಿಮಾ ಇಷ್ಟವಾಗಿದ್ದು, ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನಿರ್ಮಾಪಕ, ನೀರ್ದೆಶಕ ಆದಿತ್ಯ ಚೋಪ್ರಾ ರನ್ನು ಮದುವೆಯಾಗಿ ಹೆಣ್ಣುಮಗುವಿಗೆ ಜನ್ಮ ನೀಡಿದ ಬಳಿಕ ನಟಿಸಿದ ಮೊದಲ ಚಿತ್ರವೆ ಈ ಮಟ್ಟದ ಸದ್ದು ಮಾಡುತ್ತಿರುವುದು ಕುತುಹಲ ಮೂಡಿಸಿದೆ. ಆದರೆ ಹಿಚ್ಕಿ ಭಾರತದ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುಬಲ್ಲಿ ವಿಪಲವಾಗಿತ್ತು. ಆಮೀರಖಾನ್ ಅಭಿನಯದ 3 ಇಡಿಯಟ್ಸ್, ದಂಗಲ್ ನಂತರ ಚೀನಾದಲ್ಲಿ ಯಶಸ್ವಿಯಾದ ಚಿತ್ರ ಹಿಚ್ಕಿ….

Leave a Reply

Your email address will not be published.

Social Media Auto Publish Powered By : XYZScripts.com