ಎಚ್ಚರ.. ಭವಿಷ್ಯದಲ್ಲಿ ತಲೆದೋರಲಿದೆ ಕಾಯಂ ಉದ್ಯೋಗಗಳ ಕೊರತೆ..!

ಜಾಗತೀಕರಣ ಹಾಗೂ ಆಧುನೀಕರಣದ ಪರಿಣಾಮವಾಗಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ‌. ಉದ್ಯೋಗದ ಪಾಳಿಗಳೂ ಹೆಚ್ಚಾಗಿವೆ. ಎಷ್ಟೇ ಪಾಳಿ ಬಂದರೂ ಬೆಳಗ್ಗೆ 9ರಿಂದ ಸಂಜೆ  5ರ ವರೆಗಿನ ಉದ್ಯೋಗವೆಂದರೆ ಈಗಲೂ ಹಲವರಿಗೆ ಅಚ್ಚುಮೆಚ್ಚು. ಆದರೆ  ಭವಿಷ್ಯದಲ್ಲಿ 9ರಿಂದ 5ರವರೆಗಿನ ಕೆಲಸದ ಅವಧಿಯ ಉದ್ಯೋಗಗಳ ಕೊರತೆ ತೀವ್ರವಾಗಿ ಕಾಡಲಿದೆಯಂತೆ.
ಖ್ಯಾತ ಬಿಜಿನೆಸ್ ಜರ್ನಲಿಸ್ಟ್ ರಾಘವನ್ ಜಗನ್ನಾಥನ್ ಬರೆದಿರುವ “ಜಾಬ್ ಕ್ರೈಸಿಸ್ ಇನ್ ಇಂಡಿಯಾ” ಎಂಬ ಪುಸ್ತಕದಲ್ಲಿನ ಮಾಹಿತಿಗಳು ಇಂಥದ್ದೊಂದು ಆತಂಕವನ್ನು ಹೊರಹಾಕಿವೆ. ಮುಂದೆ 9ರಿಂದ 5ರವರೆಗಿನ ಕಾಯಂ ಉದ್ಯೋಗಗಳ ತೀವ್ರ ಕೊರತೆಯಾಗುವ ಸಾಧ್ಯತೆಗಳಿವೆ. ಯುವ ಪೀಳಿಗೆ ಕಿರು ಅವಧಿಯ ಇತರ ಕೆಲಸಗಳಿಗೂ ಸಿದ್ಧರಾಗಿರುವುದು ಒಳಿತು ಎಂದು ಅವರು ಎಚ್ಚರಿಸಿದ್ದಾರೆ.
ನಿಗದಿತ ಅವಧಿಯ ಕಾಯಂ ಉದ್ಯೋಗಗಳಿಗೆ ಬದಲಾಗಿ ಪಾರ್ಟ್‍ಟೈಮ್ ಅಥವಾ ಕಿರು ಅವಧಿಯ ಗುತ್ತಿಗೆ ಆಧರಿತ ಕೆಲಸಗಳನ್ನು ಮಾಡಬೇಕಾದ ಪರಿಸ್ಥಿತಿ ಮಧ್ಯಮವರ್ಗದ ಉದ್ಯೋಗಿಗಳಿಗೆ ಬರಬಹುದು ಎಂದು ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com