Cricket : 2ನೇ ಟೆಸ್ಟ್ ನಲ್ಲಿ ಆಸೀಸ್ ವಿರುದ್ಧ 373 ರನ್ ಜಯ : ಸರಣಿ ಗೆದ್ದ ಪಾಕ್ ತಂಡ

ಅಬುಧಾಬಿಯ ಶೇಖ್ ಜಾಯೇದ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ 373 ರನ್ ಅಂತರದ ಜಯ ಗಳಿಸಿದೆ. ಮೂಲಕ ಎರಡು ಟೆಸ್ಟ್ ಗಳ ಸರಣಿಯನ್ನು ಪಾಕಿಸ್ತಾನ 1-0 ಯಿಂದ ತನ್ನದಾಗಿಸಿಕೊಂಡಿದೆ.

ಭಾರೀ ಹಿನ್ನಡೆಯಲ್ಲಿದ್ದ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿಯೂ ತೀವ್ರ ಕುಸಿತ ಕಂಡು 164ಕ್ಕೆ ಆಲೌಟ್ ಆಯಿತು. ಆಸೀಸ್ ಪರವಾಗಿ ಮಾರ್ನ್ಸ್ ಲಾಬುಚಾನ್ 43, ಟ್ರಾವಿಸ್ ಹೆಡ್ 36, ಆ್ಯರನ್ ಫಿಂಚ್ 31 ರನ್ ಗಳಿಸಿದರು. ಪಾಕಿಸ್ತಾನದ ಪರವಾಗಿ ಮೊಹಮ್ಮದ್ ಅಬ್ಬಾಸ್ 5, ಯಾಸಿರ್ ಷಾಹ್ 3 ಹಾಗೂ ಮೀರ್ ಹಮ್ಜಾ 1 ವಿಕೆಟ್ ಪಡೆದರು.

ಎರಡನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಮತ್ತು ಸರಣಿಯಲ್ಲಿ ಒಟ್ಟು 17 ವಿಕೆಟ್ ಪಡೆದ ಮೊಹಮ್ಮದ್ ಅಬ್ಬಾಸ್ ಪಂದ್ಯಶ್ರೇಷ್ಟ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿಯನ್ನು ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com