ಮೈಸೂರ ರಾಜಮನೆತನದಲ್ಲಿ ಒಂದೇ ದಿನ ಎರಡು ಸಾವು: ಒಡೆಯರ್ ಸಹೋದರಿ ನಿಧನ..

ಮೈಸೂರು ರಾಜವಂಶಸ್ಥರಿಗೆ ಇಂದು ಶೋಕದ ದಿನವಾಗಿದ್ದು ಒಂದೇ ದಿನ ಎರಡು ಸಾವು ಸಂಭವಿಸಿದೆ. ಇಂದು ಸಂಜೆಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿದೇವಿ ನಿಧನರಾಗಿದ್ದಾರೆ.


ಕಳೆದ ಒಂದು ವಾರದಿಂದ ಮೈಸೂರು ರಾಜವಂಶಸ್ಥೆ ವಿಶಾಲಾಕ್ಷಿದೇವಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ವಿಶಾಲಾಕ್ಷಿದೇವಿ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಇಂದು ಬೆಳಿಗ್ಗೆಯಷ್ಟೇ ರಾಜವಂಶಸ್ಥೆ ಪ್ರಮೋದಾದೇವಿ ಅವರ ತಾಯಿ ಪುಟ್ಟಚಿನ್ನಮ್ಮಣ್ಣಿ ಅವರ ಸಾವನ್ನಪ್ಪಿದ್ದಾರೆ. ಹೀಗಾಗಿ ಇಂದು ಮೈಸೂರು ಅರಮನೆಯಲ್ಲಿ ನಡೆಯಬೇಕಿದ್ದ ಧಾರ್ಮಿಕ ಕಾರ್ಯಗಳನ್ನ ಮುಂದೂಡಲಾಗಿತ್ತು. ಇದೀಗ ಮತ್ತೊಂದು ಸಾವಿನ ಸುದ್ದಿ ಮೈಸೂರು ರಾಜಮನೆತನದವರಿಗೆ ನೋವು ತಂದಿದೆ.

ಬೆಂಗಳೂರಿನ ನಿವಾಸಿಯಾಗಿರುವ ಮೈಸೂರು ರಾಜಮನೆತನದ ವಿಶಾಲಾಕ್ಷಿದೇವಿ ಅವರು ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಪರಿಸ್ಥಿತಿ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಿಶಾಲಾಕ್ಷಿದೇವಿ ಅವರಿಗೆ ಪ್ರಾಣಿಗಳನ್ನು ಕಂಡರೆ ಅಚ್ಚುಮೆಚ್ಚು. ಈ ಹಿಂದೆ ಅವರೇ ಚಿರತೆ ಮರಿಯೊಂದನ್ನು ಸಾಕಿದ್ದರು. ಬಳಿಕ ಅದು ದೊಡ್ಡದಾಗಿ ತನ್ನ ಭೇಟೆಯನ್ನು ತಾನೇ ಹುಡುಕಲು ಶಕ್ತವಾದ ಬಳಿಕ ಬಂಡೀಪುರ ಅರಣ್ಯಕ್ಕೆ ಬಿಟ್ಟಿದ್ದರು. ಆ ನಂತರದ ದಿನಗಳಲ್ಲಿ ಈ ಚಿರತೆ ವಿಶಲಾಕ್ಷಿ ದೇವಿ ಅವರನ್ನು ಎಷ್ಟು ಹಚ್ಚಿಕೊಂಡಿತ್ತು ಅಂದ್ರೆ, ಅವರು ಅರಣ್ಯಕ್ಕೆ ಬಂದು ನಿರ್ಧಿಷ್ಠ ಸ್ಥಳದಲ್ಲಿ ಅದನ್ನು ಕೂಗಿ ಕರೆದರೆ, ಆ ಚಿರತೆ ಅಲ್ಲಿಗೆ ಬರುತ್ತಿತ್ತು. ಅಷ್ಟರಮಟ್ಟಿಗೆ ಇಬ್ಬರ ನಡುವೆ ಬಾಂಧವ್ಯ ಮೂಡಿತ್ತು.

Leave a Reply

Your email address will not be published.

Social Media Auto Publish Powered By : XYZScripts.com