ಬನ್ನಿಮಂಟಪದತ್ತ ವಿಶ್ವವಿಖ್ಯಾತ ಜಂಬೂಸವಾರಿ: ಮೈಸೂರಿನಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ..

ವಿಶ್ವವಿಖ್ಯಾತ ಮೈಸೂರು ದಸರಾದ ಅಂತಿಮ ಮತ್ತು ಕುತೂಹಲದ ಘಟ್ಟವಾದ ಜಂಬೂಸವಾರಿ ಮೆರವಣಿಗೆ ಸಾಗುತ್ತಿದ್ದು ಕ್ಯಾಪ್ಟನ್ ಅರ್ಜುನ ಅಂಬಾರಿ ಹೊತ್ತು ರಾಜಬೀದಿಯಲ್ಲಿ ಸಾಗುತ್ತಿದ್ದಾನೆ.ಇನ್ನು ದಸರಾ ಮಹೋತ್ಸವದ ಕೊನೆಯ ದಿನ ಸಾಂಸ್ಕೃತಿಕ ನಗರಿಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿತು.

ಜಂಬೂಸವಾರಿ ಮೆರವಣಿಗೆಯಲ್ಲಿ ಕ್ಯಾಫ್ಟನ್ ಅರ್ಜುನನ ಜತೆ ಗಜಪಡೆಯ 12 ಆನೆಗಳು ಸಾಥ್ ನೀಡುತ್ತಿದ್ದು, ಇದೀಗ ಜಂಬೂ ಸವಾರಿ ಮೆರವಣಿಗೆ ಬನ್ನಿಮಟ್ಟಪದತ್ತ ಸಾಗುತ್ತಿದೆ. ಸ್ತಬ್ದ ಚಿತ್ರ, ಮತ್ತೊಂದೆಡೆ ಕಲಾತಂಡಗಳು ಮೆರವಣಿಯಲ್ಲಿ ಸಾಗುತ್ತಿವೆ. ದೇಶವಿದೇಶಗಳಿಂದ ಆಗಮಿಸಿರುವ ಲಕ್ಷಾಂತರ ಪ್ರವಾಸಿಗರು, ಅರಮನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಿಂತು ಜಂಬೂಸವಾರಿಯನ್ನು ವೀಕ್ಷಿಸಿದರು.


ಅರಮನೆ ಆವರಣದಲ್ಲಿ ಸಾಗಿ ಬಲರಾಮದ್ವಾರದ ಮೂಲಕ ಹೊರಬಂದು ಕೆ.ಆರ್ ಸರ್ಕಲ್, ಆಯುರ್ವೇದ ಸರ್ಕಲ್ ಮೂಲಕ ಬನ್ನಿಮಂಟಪಕ್ಕೆ ಜಂಬೂ ಸವಾರಿ ಮೆರವಣಿಗೆ ಸಾಗುತ್ತಿದೆ. ಜಂಬೂ ಸವಾರಿ ಅರಮನೆ ನಗರಿಯಲ್ಲಿ ವೈಭವೋಪೇತವಾಗಿ ನಡೆಯಿತು.

ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಪ್ರಾಕೃತಿಕ ಶ್ರೀಮಂತಿಕೆಗಳನ್ನು ಬಿಂಬಿಸುವ ನಾಡಿನ ಮೂಲೆ ಮೂಲೆಯಿಂದ ಆಗಮಿಸುವ 100ಕ್ಕೂ ಹೆಚ್ಚು ಕಲಾ ತಂಡಗಳು, ರಾಜ್ಯದ ಎಲ್ಲಾ ಜಿಪಂ ಹಾಗೂ ವಿವಿಧ ಇಲಾಖೆ, ನಿಗಮಗಳ ಒಟ್ಟು 42 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ಇನ್ನು ಸಂಜೆ ಬನ್ನಿಮಂಟಪದಲ್ಲಿ ಜಂಬೂ ಸವಾರಿ ಮೆರವಣಿಗೆ ಕೊನೆಗೊಳ್ಳಲಿದ್ದು ನಂತರ ಬನ್ನಿಮಂಟಪ ಮೈದಾನದಲ್ಲಿ ಪಂಜಿನಕವಾಯತು ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com