Cricket : ಗುವಾಹಟಿಯಲ್ಲಿ Team India ಸೂಪರ್ ಸಂಡೆಯಂದು ಮಾಡಲಿದೆ ಹೊಸ ದಾಖಲೆ..

ಗುವಾಹಟಿಯಲ್ಲಿ ಟೀಮ್ ಇಂಡಿಯಾ ಮಾಡಲಿರುವ ಸಾಧನೆ ಏನು ಗೋತ್ತಾ..?
ಸೂಪರ್ ಸಂಡೆಯಂದು ಭಾರತದ ಪಾಲಿಗೆ ಸ್ಮರಣಿಯ ಪಂದ್ಯ..?
ಟೀಮ್ ಇಂಡಿಯಾ ತವರಿನಲ್ಲಿ ವೆಸ್ಟ್ ಇಂಡಿಸ್ ವಿರುದ್ಧ ಏಕದಿನ ಪಂದ್ಯ ಆಡಲು ಸಿದ್ಧತೆ ನಡೆಸಿದೆ. ಭಾನುವಾರದಿಂದ ವಿರಾಟ್ ಪಡೆ, ವಿಂಡೀಸ್ ತಂಡಕ್ಕೆ ಸವಾಲು ಎಸೆಯಲು ಪ್ಲಾನ್ ಮಾಡಿಕೊಂಡಿದೆ. ಭಾರತದಲ್ಲಿ ಬ್ಲ್ಯೂ ಬಾಯ್ಸ್ ಮತ್ತೊಂದು ಮೈಲುಗಲ್ಲು ಮುಟ್ಟಲಿದೆ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡವೂ ಮಾಡದ ಅಪರೂಪದ ಸಾಧನೆ ಮಾಡಲಿದೆ.
ಈಗಾಗಲೇ ಟೆಸ್ಟ್ ಸರಣಿ ಗೆದ್ದು ಬೀಗಿರುವ ವಿರಾಟ್ ಬ್ರಿಗೇಡ್, ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಭರ್ಜರಿ ತಾಲೀಮು ನಡೆಸಿದೆ. ಗುವಾಹಟಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಹೊಸ ಇತಿಹಾಸ ನಿಮರ್ಿಸಲಿದೆ. ಹೌದು.. ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ ಭಾರತದ ಪಾಲಿಗೆ 950ನೇ ಏಕದಿನ ಪಂದ್ಯ ಆಗಿರಲಿದೆ. ಈ ಮೂಲಕ ವಿಶ್ವ ಕ್ರಿಕೆಟ್ ಭೂ ಪಟದಲ್ಲಿ ಈ ಅಂಕಿ ಮುಟ್ಟಿದ ಸಾಧನೆ ಬ್ಲ್ಯೂ ಬಾಯ್ಸ್ ದಾಗಲಿದೆ.
ಏಕದಿನ ಕ್ರಿಕೆಟ್ನಲ್ಲಿ 900ಕ್ಕೂ ಹೆಚ್ಚು ಪಂದ್ಯ ಗೆದ್ದ ಕೀತರ್ಿಗೆ ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾ ಪಾಲಿಗೆದೆ. ಕಾಂಗರೂ ಪಡೆಯ ಹುಡುಗರು 916 ಏಕದಿನ ಪಂದ್ಯಗಳನ್ನು ಆಡಿ ಸೈ ಎನಿಸಿಕೊಂಡ್ರೆ, ವಿರಾಟ್ ಪಡೆ ಭಾನುವಾರ 950ನೇ ಪಂದ್ಯ ಆಡಿ ಬೀಗಲಿದೆ. 1974ರಲ್ಲಿ ಆರಂಭವಾದ ಟೀಮ್ ಇಂಡಿಯಾ ಏಕದಿನ ಕ್ರಿಕೆಟ್ ಅಭಿಯಾನ ಸ್ಮರಣೀಯ. ಭಾರತ ಮೊದಲ ಏಕದಿನ ಸರಣಿ ಇಂಗ್ಲೆಂಡ್ ವಿರುದ್ಧ ಆಡಿ ಕೈ ಸುಟ್ಟುಕೊಂಡಿತ್ತು. ಬ್ಲ್ಯೂ ಬಾಯ್ಸ್ ಈ ವರೆಗೆ ಆಡಿದ 949 ಪಂದ್ಯಗಳಲ್ಲಿ 489 ಜಯ ಸಾಧಿಸಿದ್ರೆ, 411 ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ವರೆಗೆ ವೆಸ್ಟ್ ಇಂಡಿಸ್ ತಂಡ 780 ಪಂದ್ಯ ಆಡಿದೆ.

2 thoughts on “Cricket : ಗುವಾಹಟಿಯಲ್ಲಿ Team India ಸೂಪರ್ ಸಂಡೆಯಂದು ಮಾಡಲಿದೆ ಹೊಸ ದಾಖಲೆ..

Leave a Reply

Your email address will not be published.

Social Media Auto Publish Powered By : XYZScripts.com