Me too : ನಟಿಯರ ಬಳಿಕ ಈಗ ಮಿ ಟೂ ಎಂದ ನಟ! Blooywood ನಟ ಹೇಳಿದ ಸತ್ಯ..

ದಿನದಿಂದ ದಿನಕ್ಕೆ ಮಿ ಟೂ ಅಭಿಯಾನದ ತೀವ್ರತೆ ಹೆಚ್ಚಾಗುತ್ತಿದೆ‌. ಸಮಾಜದ ವಿವಿಧ ಕ್ಷೇತ್ರಗಳ ಹೆಣ್ಣುಮಕ್ಕಳು ತಮ್ಮ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಯಿ ಬಿಡುತ್ತಿದ್ದಾರೆ.


ನಟಿಯರು, ಪತ್ರಕರ್ತೆಯರು, ಕಲಾವಿದರು ಹೀಗೆ ಅನೇಕ ಮಂದಿ ತಮ್ಮ ಕೆಟ್ಟ ಅನುಭವ ಹಂಚಿಕೊಂಡಿದ್ದಾರೆ..
ಇಷ್ಟು ದಿನ ಮಹಿಳೆಯರಷ್ಟೇ ಮಾತಾಡ್ತಾ ಇದ್ದರು. ಈಗ ಪುರುಷರ ಸರದಿ… ಬಾಲಿವುಡ್ ನಟರೊಬ್ಬರು ತಮ್ಮ ಮೇಲೆ ವ್ಯಕ್ತಿಯೊಬ್ಬ ದೌರ್ಜನ್ಯ ನಡೆಸಿದ್ದ ಎಂದು ಹೇಳಿಕೊಂಡಿದ್ದಾರೆ.

ರೇಸ್ 3 ಚಿತ್ರದಲ್ಲಿ ಸಲ್ಮಾನ್ ಖಾನ್ ಸಹೋದರನ ಪಾತ್ರ ನಿರ್ವಹಿಸಿದ್ದ ಶಕೀಬ್ ಸಲೀಂ, 21ನೇ ವಯಸ್ಸಿನಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು ಎಂದು ಸಂದರ್ಶನವೊಂದರ ವೇಳೆ ಹೇಳಿದ್ದಾರೆ.

21 ವರ್ಷದಲ್ಲಿ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾಗ, ವ್ಯಕ್ತಿಯೊಬ್ಬ ನನ್ನ ಪ್ಯಾಂಟ್ ನೊಳಗೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದ. ಕೂಡಲೇ ನಾನು ಜೋರಾಗಿ ಕೂಗಾಡಿದ್ದರಿಂದ ಕೈ ತಗೆದು ಆತ ಹೊರಟು ಹೋದ ಎಂದಿರುವ, ಶಕೀಬ್ ಈ ರೀತಿ ಮಾಡಿದವರು ಯಾರೆಂಬ ರಹಸ್ಯವನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

ಇತ್ತೀಚಿಗೆ ಹೆಚ್ಚುತ್ತಿರುವ ಈ ಅಭಿಯಾನದ ಬಗ್ಗೆ ಅನೇಕ ಆರೋಪ ಪ್ರತ್ಯಾರೋಪ ಕೇಳಿಬಂದಿತ್ತು. ಇದೇ ರೀತಿ ಸೈಫ್ ಆಲಿ ಖಾನ್ ತಾನು 25 ವರ್ಷದ ಹಿಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗದಿದ್ದರೂ, ಕಿರುಕುಳ ನಡೆದಿತ್ತು. ಒಂದು ವೇಳೆ ಯಾರಾದರೂ ತನ್ನ ಮಗಳ ಮೇಳೆ ದೌರ್ಜನ್ಯ ಎಸಗಿದರೆ, ಕಪಾಳಮೋಕ್ಷ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com