WATCH : ಮೈದಾನಕ್ಕೆ ನುಗ್ಗಿ ರೋಹಿತ್ ಶರ್ಮಾಗೆ ಮುತ್ತಿಡಲು ಯತ್ನಿಸಿದ ಅಭಿಮಾನಿ..!

ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಸೋಮವಾರ ಮುಂಬೈ ಹಾಗೂ ಬಿಹಾರ ತಂಡಗಳ ನಡುವೆ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಿತು. ಬಿಹಾರ ವಿರುದ್ಧ 9 ವಿಕೆಟ್ ಗಳಿಂದ ಸುಲಭ ಜಯ ಸಾಧಿಸಿದ ಮುಂಬೈ ಸೆಮಿಫೈನಲ್ ಪ್ರವೇಶಿಸಿತು.

ಮೊದಲು ಬ್ಯಾಟ್ ಮಾಡಿದ ಬಿಹಾರ ಕೇವಲ 28.2 ಓವರುಗಳಲ್ಲಿ 69ಕ್ಕೆ ಆಲೌಟ್ ಆಯಿತು. ಚೇಸ್ ಮಾಡಲಿಳಿದ ಮುಂಬೈ 12.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿ ಗೆಲುವು ಸಾಧಿಸಿತು.

ಮುಂಬೈ ಪರವಾಗಿ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುವ ವೇಳೆ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ ಕಾಲಿಗೆ ನಮಸ್ಕರಿಸಿ, ಅಪ್ಪಿಕೊಂಡು, ಮುತ್ತಿಡಲು ಯತ್ನಿಸಿದ್ದಾನೆ. ವಿಡಿಯೋ ಇಲ್ಲಿದೆ..

Leave a Reply

Your email address will not be published.

Social Media Auto Publish Powered By : XYZScripts.com