‘ಯಶ್ ನನ್ನ ನೆಚ್ಚಿನ ನಟ..’ : ಬಾಲಿವುಡ್ ಖ್ಯಾತ ನಟ ಶ್ರೇಯಸ್ ತಲ್ಪಾಡೆ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಹಲವಾರು ಕನ್ನಡ ಸಿನಿಮಾಗಳು ಭಾರತದ ಚಿತ್ರರಂಗದಲ್ಲಿ ಹೆಸರು ಮಾಡುತ್ತಿವೆ. ಕನ್ನಡ ಸಿನಿಮಾಗಳನ್ನು ನಾನು ಮೊದಲಿನಿಂದಲೂ ನೋಡಿಕೊಂಡು ಬೆಳೆದವನು ಡಾ. ರಾಜ್ ಕುಮಾರ್ ಹಾಗೂ ಯಶ್ ನನ್ನ ನೆಚ್ಚಿನ ನಟರಾಗಿದ್ದಾರೆ ಎಂದು ಬಾಲಿವುಡ್ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ಲಾಲ್‌ಬಾಗ್ ಪಶ್ಚಿಮ ದ್ವಾರದ ಹತ್ತಿರ ನೂತನವಾಗಿ ನಿರ್ಮಾಣವಾಗಿರುವ ಸುಚಿ, ರುಚಿ ಸೇವೆ ಹಾಗೂ ಉತ್ತಮ ಆರೋಗ್ಯಕ್ಕೆ ಮಾನ್ಯತೆ ನೀಡುವ ‘ಎನರ್ಜಿ ಅಡ್ಡಾ’ ಹೆಲ್ತ್ ಆಂಡ್ ವೆಲ್‌ನೆಸ್ ರೆಸ್ಟೋರೆಂಟ್ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು ನನಗೆ ನೆಚ್ಚಿನ ತಾಣ. ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿದೆ. ಇಲ್ಲಿ ನನಗೆ ಚಿತ್ರರಂಗದ ಹಲಾವಾರು ಗೆಳೆಯರಿದ್ದು, ಇದರಿಂದಾಗಿ ಇಲ್ಲಿಗೆ ಬಂದು ಹೋಗಲು ಯಾವುದೇ ಮುಜುಗರವಿಲ್ಲ ಎಂದರು. ಇನ್ನೂ ಎನರ್ಜಿ ಅಡ್ಡಾ ಬಗ್ಗೆ ಪ್ರತಿಕ್ರಿಯಿಸಿ ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಠಿಕ ಆಹಾರ ಸೇವನೆ ಮಾಡಬೇಕಾದ್ದು ಅತ್ಯವಶ್ಯಕವಾಗಿದೆ. ಇಲ್ಲಿ ಗಿಡಮೂಲಿಕೆಗಳಿಂದ ತಯಾರಿಸುವ ಜ್ಯೂಸ್ ತುಂಬಾ ಆರೋಗ್ಯಯುತವಾಗಿದೆ ಎಂದರು.

ಬಾಲಿವುಡ್‌ನ ಖ್ಯಾತ ನಟಿ ಬ್ರೂನಾ ಅಬ್ದುಲ್ಲಾ ಪ್ರತಿಕ್ರಿಯಿಸಿ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಸಿಕ್ಕರೆ ಖಂಡಿತವಾಗಿಯೂ ನಾನು ನಟಿಸುತ್ತೇನೆ. ನನ್ನ ಸಿನಿಮಾಗಳನ್ನು ನೋಡಿ ಕನ್ನಡದ ಜನತೆ ಸಾಮಾಜಿಕ ಜಾಲ ತಾಣಗಳಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ನನಗೆ ತುಂಬಾ ಸಂತಸ ತಂದಿದೆ. ಅಲ್ಲದೇ ಬೆಂಗಳೂರು ನನಗೆ ಎರಡನೇ ನೆಚ್ಚಿನ ತಾಣ. ಇಲ್ಲಿನ ಕೂಲ್ ವಾತಾವರಣ ಎಂತಹವರನ್ನು ತನ್ನತ್ತಾ ಆಕರ್ಷಿಸುತ್ತದೆ.

ಇನ್ನೂ ಭಾರತೀಯ ಆಹಾರ ಪದ್ದತಿ ವಿಶ್ವದ ಇತರೆ ರಾಷ್ಟ್ರಗಳಿಗೂ ಮಾದರಿಯಾಗಿದ್ದು, ಇಂದು ಬೆಂಗಳೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎನರ್ಜಿ ಅಡ್ಡಾದಲ್ಲಿ ಪೌಷ್ಠಿಕಾಂಶಯುತವಾದ ತರಯೇವಾರಿ ಖಾದ್ಯಗಳು ಜನರನ್ನು ತಮ್ಮತ್ತಾ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ ಎಂದರು.

ಎನರ್ಜಿ ಅಡ್ಡಾ ರೆಸ್ಟೋರೆಂಟ್ ಮಾಲೀಕರಾದ ರಾಹುಲ್ ವಿನಾಕಿಯಾ ಪ್ರತಿಕ್ರಿಯಿಸಿ ಬೆಂಗಳೂರಿನ ಜನತೆಗೆ ವಿಶಿಷ್ಟವಾದ ಹಾಗೂ ಆರೋಗ್ಯಕರವಾದ ಖಾದ್ಯಗಳನ್ನು ಊಣಬಡಿಸುವ ಉದ್ದೇಶದಿಂದ ಎನರ್ಜಿ ಅಡ್ಡಾವನ್ನು ತೆರೆಯಲಾಗಿದೆ. ಶುದ್ದ ಮತ್ತು ಉತ್ತಮ ಗುಣಮಟ್ಟದಿಂದ ಕೂಡಿರುವ ಖಾದ್ಯಗಳನ್ನು ಜನರಿಗೆ ತಲುಪಿಸುವುದು ನಮ್ಮ ಕರ್ತವ್ಯವಾಗಿದೆ. ಜನರು ಇಲ್ಲಿನ ಗುಣಮಟ್ಟದ ಬಗ್ಗೆ ಸಂಶಯಪಡುವ ಅಗತ್ಯವೇ ಇಲ್ಲ ಎಂದರು.

ಕಾರ್ಯಕ್ರಮದಲ್ಲಿ ಮೀಸ್ ಅರ್ಥ್ ವಿಜೇತೆ ಭವ್ಯ ಗೌಡ, ನಟ ರಾಜೀವ್, ಚಿಕ್ಕಪೇಟೆ ಶಾಸಕ ಡಾ. ಉದಯ್ ಬಿ. ಗರುಡಾಚಾರ್ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ಶೀರ್ಷಿಕೆ :
ನಗರದ ಲಾಲ್‌ಬಾಗ್ ಪಶ್ಚಿಮ ದ್ವಾರದ ಹತ್ತಿರ ನೂತನವಾಗಿ ನಿರ್ಮಾಣವಾಗಿರುವ ‘ಎನರ್ಜಿ ಅಡ್ಡಾ’ ಹೆಲ್ತ್ ಆಂಡ್ ವೆಲ್‌ನೆಸ್ ರೆಸ್ಟೋರೆಂಟ್‌ನನ್ನು ಬಾಲಿವುಡ್ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಹಾಗೂ ನಟಿ ಬ್ರೂನಾ ಅಬ್ದುಲ್ಲಾ ಉದ್ಘಾಟಿಸಿದರು. ಈ ವೇಳೆ ಮೀಸ್ ಅರ್ಥ್ ವಿಜೇತೆ ಭವ್ಯ ಗೌಡ, ಚಿಕ್ಕಪೇಟೆ ಶಾಸಕ ಡಾ. ಉದಯ್ ಬಿ. ಗರುಡಾಚಾರ್, ರೆಸ್ಟೋರೆಂಟ್ ಮಾಲೀಕರಾದ ರಾಹುಲ್ ವಿನಾಕಿಯಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com