By-Election : ಮಂಡ್ಯದಲ್ಲಿ ಶಿವರಾಮೇಗೌಡ, ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

ರಾಮನಗರ : ನವೆಂಬರ್ 3 ರಂದು ನಡೆಯಲಿರುವ ಉಪ ಚುನಾವಣೆಗೆ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ರಾಮನಗರ ಚುನವಣಾಧಿಕಾರಿ ಕೃಷ್ಣ ಮೂರ್ತಿ ಅವರಿಗೆ ಎಸ್ ಕಚೇರಿಯಲ್ಲಿ ಅನಿತಾ ಕುಮಾರಸ್ವಾಮಿ ನಾಮ ಪತ್ರ ಸಲ್ಲಿಸಿದರು,  ಈ ಸಂದರ್ಭದಲ್ಲಿ ಪತಿ ಕುಮಾರ ಸ್ವಾಮಿ ಕೂಡ ಹಾಜರಿದ್ದರು. ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಬೆಂಗಳೂರಿನ ಬನಶಂಕರಿ ದೇವಾಸ್ಥಾನಕ್ಕೆ ತೆರಳಿದ್ದ ಅನಿತಾ ಕುಮಾರಸ್ವಾಮಿ ಬಿಫಾರಂ ಗೆ ಪೂಜೆ ಸಲ್ಲಿಸಿದರು.
ಮಂಡ್ಯ ಲೋಕಸಭೆ ಕ್ಷೇತ್ರದ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿ ಎಲ್.ಆರ್ ಶಿವರಾಮೇಗೌಡ  ರವಿವಾರ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಂಡ್ಯ ಉಸ್ತುವಾರಿ ಸಚಿವ ಸಿ.ಎಸ್ ಪುಟ್ಟರಾಜು,ಸಚಿವ ಸಾ.ರಾ ಮಹೇಶ್, ಜಾರ್ಜ್,ಡಿ.ಸಿ ತಮ್ಮಣ್ಣ ಹಾಗೂ ಮಂಡ್ಯ ಶಾಸಕರು ಹಾಜರಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com