WATCH : ಮ್ಯಾಚ್ ನಡುವೆಯೇ ಮೈದಾನಕ್ಕೆ ನುಗ್ಗಿದ ಅಭಿಮಾನಿ – ಕೊಹ್ಲಿಗೆ ಮುತ್ತಿಡಲು ಯತ್ನ..!

ಭಾರತ ಹಾಗೂ ವೆಸ್ಟ್ಇಂಡೀಸ್ ತಂಡಗಳ ನಡುವೆ ರಾಜಕೋಟ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯೊಂದಿಗೆ ಸೆಲ್ಫೀ ಕ್ಲಿಕ್ಕಿಸಲು ಯತ್ನಿಸಿದ್ದ. ಹೈದರಾಬಾದ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಅಂತಹುದೇ ಘಟನೆ ಮರುಕಳಿಸಿದೆ.

ಶುಕ್ರವಾರ ನಡೆದ ಮೊದಲ ದಿನದಾಟದಲ್ಲಿ ವೆಸ್ಟ್ ಇಂಡೀಸ್ ಪಡೆಯ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಜಾರಿಯಲ್ಲಿತ್ತು. ಈ ವೇಳೆ ಮೈದಾನದ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸುವಲ್ಲಿ ಯಶಸ್ವಿಯಾದ ಅಭಿಮಾನಿಯೊಬ್ಬ ಮ್ಯಾಚ್ ನಡುವೆಯೇ ಮೈದಾನದೊಳಗೆ ನುಗ್ಗಿದ್ದಾನೆ. ಅಲ್ಲದೇ ಫೀಲ್ಡಿಂಗ್ ಮಾಡುತ್ತಿದ್ದ ಕ್ಯಾಪ್ಟನ್ ವಿರಾಟ್ ಕೊಹ್ಲಿಯೊಂದಿಗೆ ಸೆಲ್ಫೀ ಕ್ಲಿಕ್ಕಿಸಲು ಯತ್ನಿಸಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ಅಭಿಮಾನಿ ಕ್ಯಾಪ್ಟನ್ ಕೊಹ್ಲಿಗೆ ಮುತ್ತಿಡಲು ಯತ್ನಿಸಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com