ವಿಂಡೀಸ್ ಏಕದಿನ ಸರಣಿಗೆ ಭಾರತ ತಂಡ – ನಾಯಕನಾಗಿ ಮರಳಿದ ಕೊಹ್ಲಿ, ಆಯ್ಕೆಯಾದ ಪಂತ್

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗಾಗಿ 15 ಸದಸ್ಯರನ್ನೊಳಗೊಂಡ ಭಾರತ ತಂಡವನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ. ಏಷ್ಯಾಕಪ್ ನಲ್ಲಿ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ನಾಯಕನಾಗಿ ಏಕದಿನ ತಂಡಕ್ಕೆ ಮರಳಿದ್ದಾರೆ. ಆರಂಭಿಕ ಬ್ಯಾಟ್ಸಮನ್ ರೋಹಿತ್ ಶರ್ಮಾಗೆ ಉಪನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ.

ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಇದೇ ಮೊದಲ ಬಾರಿಗೆ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಷ್ಯಾಕಪ್ ನಲ್ಲಿ ಆಡಿದ್ದ ಯುವ ವೇಗಿ ಖಲೀಲ್ ಅಹ್ಮದ್ ಗೆ ಮತ್ತೊಮ್ಮೆ ಅವಕಾಶ ಲಭಿಸಿದೆ. ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬದಲಿಗೆ ರವೀಂದ್ರ ಜಡೇಜಾಗೆ ಆಯ್ಕೆಗಾರರು ಮಣೆ ಹಾಕಿದ್ದಾರೆ.

ತಂಡ ಇಂತಿದೆ : ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ಮನೀಶ್ ಪಾಂಡೆ, ಎಮ್.ಎಸ್ ಧೋನಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಖಲೀಲ್ ಅಹ್ಮದ್, ಶಾರ್ದೂಲ್ ಠಾಕೂರ್, ಕೆ.ಎಲ್ ರಾಹುಲ್.

2 thoughts on “ವಿಂಡೀಸ್ ಏಕದಿನ ಸರಣಿಗೆ ಭಾರತ ತಂಡ – ನಾಯಕನಾಗಿ ಮರಳಿದ ಕೊಹ್ಲಿ, ಆಯ್ಕೆಯಾದ ಪಂತ್

Leave a Reply

Your email address will not be published.

Social Media Auto Publish Powered By : XYZScripts.com