‘ಪ್ರಧಾನಿ ನರೇಂದ್ರ ಮೋದಿ ಓರ್ವ ಭ್ರಷ್ಟ ವ್ಯಕ್ತಿ..’ : ರಾಹುಲ್ ಗಾಂಧಿ ವಾಗ್ದಾಳಿ

ರಫೇಲ್ ಡೀಲ್ ಕುರಿತಂತೆ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ ಪ್ರಧಾನಿ ನರೇಂದ್ರ ಮೋದಿ ಓರ್ವ ಭ್ರಷ್ಟ ವ್ಯಕ್ತಿಯಾಗಿದ್ದಾರೆ ‘ ಎಂದು ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ ಪ್ರಧಾನಿ ನರೇಂದ್ರ ಮೋದಿ ಓರ್ವ ಭ್ರಷ್ಟ ವ್ಯಕ್ತಿ ಎಂಬುದು ಅತ್ಯಂತ ಸ್ಪಷ್ಟ ಸಂಗತಿಯಾಗಿದೆ. ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ ಭಾರತದ ಪ್ರಧಾನಿ ಒಬ್ಬ ಭ್ರಷ್ಟ ವ್ಯಕ್ತಿ, ಆದರೆ ವಿಚಿತ್ರವೆಂದರೆ ಮೋದಿಯವರ ಕ್ಯಾಂಪೇನ್ ಯಾವಾಗಲೂ ಭ್ರಷ್ಟಾಚಾರದ ವಿರುದ್ಧವೇ ಆಗಿರುತ್ತಿತ್ತು ‘ ಎಂದು ವ್ಯಂಗ್ಯ ಮಾಡಿದ್ದಾರೆ.

‘ ಮೋದಿಯವರು ನಿಜವಾಗಿಯೂ ನಿಮ್ಮ ಪ್ರಧಾನಿಯಲ್ಲ, ಬದಲಾಗಿ ಅನಿಲ್ ಅಂಬಾನಿಯ ಪ್ರಧಾನಿಯಾಗಿದ್ದಾರೆ ‘ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.

ಡಸಾಲ್ಟ್ ಏವಿಯೇಶನ್‌ನ ಆಂತರಿಕ ದಾಖಲೆಯ ಪ್ರಕಾರ, ರಫೇಲ್ ಡೀಲ್‌ನಲ್ಲಿ ಮುಖ್ಯ ಆಫ್‌ಸೆಟ್ ಪಾಲುದಾರನಾಗಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್ ಅನ್ನೇ ಆಯ್ಕೆ ಮಾಡದೆ ಬೇರೆ ದಾರಿಯೇ ಇರಲಿಲ್ಲ ಎಂದು ಮೀಡಿಯಾಪಾರ್ಟ್ ವೆಬ್‌ಸೈಟ್ ವರದಿ ಮಾಡಿದೆ.

Leave a Reply

Your email address will not be published.