ಜಮ್ಮು-ಕಾಶ್ಮೀರ : ಎನ್ಕೌಂಟರ್ ನಲ್ಲಿ PhD ವಿದ್ಯಾರ್ಥಿ ಸೇರಿ ಇಬ್ಬರು ಹಿಜ್ಬುಲ್ ಉಗ್ರರ ಹತ್ಯೆ..!

ಜಮ್ಮ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾದಲ್ಲಿ ಗುರುವಾರ ನಡೆಸಲಾದ ಎನ್ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಇಬ್ಬರು ಪ್ರಮುಖ ಉಗ್ರರನ್ನು ಹೊಡೆದುರುಳಿಸಲಾಗಿದೆ. ಪಿಎಚ್ ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದು, ಬಳಿಕ ಉಗ್ರ ಸಂಘಟನೆ ಸೇರಿದ್ದ ಮನನ್ ಬಶೀರ್ ವಾನಿ ಎನ್ಕೌಂಟರ್ ನಲ್ಲಿ ಹತನಾಗಿದ್ದಾನೆ.

ಹಂದ್ವಾರಾದ ಸತ್ಗುಂಡ್ ಪ್ರದೇಶದಲ್ಲಿ 27 ವರ್ಷದ ಮನನ್ ಬಶೀರ್ ವಾನಿ ಇನ್ನಿಬ್ಬರು ಉಗ್ರರೊಂದಿಗೆ ಅಡಗಿ ಕುಳಿತಿದ್ದಾನೆಬ ಗುಪ್ತಚರ ಮಾಹಿತಿಯ ಅನುಸಾರ ಬೆಳಗಿನ ಜಾವವೇ ರಕ್ಷಣಾ ಪಡೆಗಳಿಂದ ಎನ್ಕೌಂಟರ್ ಶುರುವಾಗಿತ್ತು.

ಜಮ್ಮು ಕಾಶ್ಮೀರ ಪೋಲೀಸ್, ಭಾರತೀಯ ಸೇನಾಪಡೆಗಳು ಹಾಗೂ ಹಿಜ್ಬುಲ್ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. 11 ಗಂಟೆಯವರೆಗೆ ಮುಂದುವರೆದ ಪರಸ್ಪರ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ರಕ್ಷಣಾ ಪಡೆಗಳು ಯಶಸ್ವಿಯಾಗಿವೆ.

Leave a Reply

Your email address will not be published.