25ನೇ ವಸಂತಕ್ಕೆ ಕಾಲಿಟ್ಟ ಹಾರ್ದಿಕ್ ಪಾಂಡ್ಯ : ಆಲ್ರೌಂಡರ್ ಗೆ ರಾಹುಲ್ ಶುಭ ಕೋರಿದ್ದು ಹೀಗೆ..!

ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗುರುವಾರ 25ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ತ್ ಡೇ ಬಾಯ್ ಹಾರ್ದಿಕ್ ಪಾಂಡ್ಯಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳಿಂದ ಜನ್ಮದಿನದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಟ್ವೀಟ್ ಮಾಡಿ ಶುಭಾಶಯ ತಿಳಿಸಿರುವ ಸ್ಪಿನ್ನರ್ ಹರ್ಭಜನ್ ಸಿಂಗ್ ‘ ಹ್ಯಾಪಿ ಬರ್ತ್ ಡೇ ಹಾರ್ದಿಕ್, ಗಾಯದಿಂದ ಆದಷ್ಟು ಬೇಗ ಗುಣಮುಖನಾಗು, ಮತ್ತು ಕ್ರಿಕೆಟ್ ಅಂಗಳಕ್ಕೆ ಬೇಗ ಮರಳು ‘ ಎಂದು ಹಾರೈಸಿದ್ದಾರೆ.

ಸಹ ಆಟಗಾರ ಪಾಂಡ್ಯಗೆ ಟ್ವಿಟರ್ ನಲ್ಲಿ ಶೂಭಾಶಯ ಕೋರಿರುವ ಟೀಮ್ ಇಂಡಿಯಾ ಬ್ಯಾಟ್ಸಮನ್ ಕೆ.ಎಲ್ ರಾಹುಲ್ ‘ ಹ್ಯಾಪಿ ಬರ್ತ್ ಡೇ ರಾಕ್ ಸ್ಟಾರ್, ಮೈದಾನದ ಒಳಗೆ ಹಾಗೂ ಹೊರಗೆ ಸದಾ ಹೀಗೆಯೇ ನಮ್ಮನ್ನೆಲ್ಲ ಎಂಟರ್ ಟೇನ್ ಮಾಡುತ್ತಿರು, ಬೇಗ ಚೇತರಿಸಿಕೊ, ತುಂಬಾ ಜೋರಾಗಿ ಪಾರ್ಟಿ ಮಾಡಬೇಡ ‘ ಎಂದು ಹೇಳಿದ್ದಾರೆ.

 

Leave a Reply

Your email address will not be published.