ಗಂಗಾ ಉಳಿವಿಗಾಗಿ 109 ದಿನಗಳಿಂದ ಉಪವಾಸ ಸತ್ಯಾಗ್ರಹದಲ್ಲಿದ್ದ ಜಿ.ಡಿ ಅಗರ್ವಾಲ್ ನಿಧನ

ಗಂಗಾ ನದಿಯ ಉಳಿವಿಗಾಗಿ 109 ದಿನಗಳಿಂದ ಅನಿಶ್ಚಿತ ಉಪವಾಸ ಸತ್ಯಾಗ್ರಹದಲ್ಲಿದ್ದ ಪರಿಸರವಾದಿ ಜಿ.ಡಿ ಅಗರ್ವಾಲ್ ಅವರು ರಿಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ಹೃದಯಾಘಾತದಿಂದ ಸಾವನ್ನಪ್ಪಿರುವ ಜಿ.ಡಿ ಅಗರ್ವಾಲ್ ಅವರಿಗೆ 87 ವರ್ಷ ವಯಸ್ಸಾಗಿತ್ತು.

ಸ್ವಾಮಿ ಜ್ಞಾನ ಸ್ವರೂಪ ಸಾನಂದ ಎಂದೂ ಕರೆಯಲ್ಪಡುತ್ತಿದ್ದ ಜಿ.ಡಿ ಅಗರ್ವಾಲ್ ಅವರು ಕೇಂದ್ರ ಸರ್ಕಾರವು ಗಂಗಾ ನದಿಯ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಬೇಕೆಂದು ಆಗ್ರಹಿಸಿ ಜೂನ್ 22 ರಿಂದ ಅನಿಶ್ಚಿತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

ಗಂಗಾ ನದಿಯು ತನ್ನ ಜನ್ಮಸ್ಥಳ ಗಂಗೋತ್ರಿಯಿಂದ ಹಿಡಿದು ಉತ್ತರಾಖಂಡದ ಉತ್ತರಕಾಶಿಯವರೆಗೆ ಯಾವುದೇ ಅಡೆತಡೆಗಳಿಲ್ಲದೆ ಹರಿಯುವಂತಾಗಲು ಕಾನೂನು ರೂಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಜಿ.ಡಿ ಅಗರ್ವಾಲ್ ಬೇಡಿಕೆಯಿಟ್ಟಿದ್ದರು.

ಸುಮಾರು 4 ತಿಂಗಳು ಕಾಲದ ಉಪವಾಸದ ಸಂದರ್ಭದಲ್ಲಿ ಸ್ವಾಮೀಜಿ, ಜೇನು ಮಿಶ್ರಿತ ನೀರನ್ನು ಮಾತ್ರ ಸೇವಿಸುತ್ತಿದ್ದರು. 109 ದಿನಗಳ ಕಾಲ ನಿರಂತರ ಉಪವಾಸ ಸತ್ಯಾಗ್ರಹದಲ್ಲಿದ್ದ ಸ್ವಾಮೀಜಿಯವರನ್ನು ಪೋಲೀಸರು ಬುಧವಾರ ಹರಿದ್ವಾರದಿಂದ ರಿಷಿಕೇಶದ ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.

 

Leave a Reply

Your email address will not be published.