ನೀಲಿ ತಾರೆ ವಿರುದ್ದ ಮತ್ತೆ ಪ್ರತಿಭಟನೆ : ಸನ್ನಿ ಭಾವಚಿತ್ರಕ್ಕೆ ಸಿಲಿಕಾನ್​ ಸಿಟಿಯಲ್ಲಿ ಚಪ್ಪಲಿ ಸೇವೆ…!

ಬೆಂಗಳೂರು :  ಬಿ ಟೌನ್​ ಹಾಟ್​ ಬೆಡಗಿ ಸನ್ನಿ ಲಿಯೋನ್​ ವಿರುದ್ದ ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸನ್ನಿ ವೀರ ಮಹಾದೇವಿ ಚಿತ್ರದಲ್ಲಿ  ನಟಿಸುತ್ತಿಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸನ್ನಿ ಡ್ಯಾನ್ಸ್​ ಮಾಡಲು ಬೆಂಗಳೂರಿನ ಮಾನ್ಯತಾ ಟೇಕ್​ ಪಾರ್ಕ್​ ಬರುತ್ತಿದ್ದು, ಇದಕ್ಕೂ ವಿರೋಧ ವ್ಯಕ್ತವಾಗಿತ್ತು, ಸನ್ನಿ ಬೆಂಗಳೂರಿಗೆ ಬರಬಾರದು ಅವರು ನೀಲಿ ಚಿತ್ರದ ತಾರೆ  ಇದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತದೆ. ನಮ್ಮದು ಸಂಸ್ಕೃತಿನಾಡು, ಇದರಿಂದ ನಮ್ಮ ಸಂಸ್ಕೃತಿಗೆ ಹಾಳಾಗುತ್ತೆ  ಎಂದು ಸನ್ನಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು.

100 ಕೋಟಿ ವೆಚ್ಚದ ಐತಿಹಾಸಿಕ ಚಿತ್ರವಾದ ವೀರ ಮಹಾದೇವಿ ಚಿತ್ರ ಪಂಚ ಭಾಷೆಗಳಲ್ಲಿ ತಯಾರಾಗುತ್ತಿದ್ದು, ಸನ್ನಿ ಲೀಡ್​ ರೋಲ್​ ನಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಚಿತ್ರದಲ್ಲಿ ಸನ್ನಿ ನಟಿಸಬಾರದು, ಇದು ಅಪರಾಧ ಯಾವುದೇ ಕಾರಣಕ್ಕೂ ವೀರ ಮಹಾದೇವಿ ಈ ಚಿತ್ರದಲ್ಲಿ ಸನ್ನಿ ನಟಿಸಬಾರದು. ಹೀಗಾಗಿ ಈ ಚಿತ್ರದ ವಿರುದ್ಧ ಹೋರಾಟ ಮಾಡುತ್ತೀವಿ ಎಂದು ಸನ್ನಿ ಭಾವಚಿತ್ರಕ್ಕೆ ಕಾರ್ಯಕರ್ತರು ಚಪ್ಪಲಿ ಸೇವೆ ಮಾಡಿದ್ರು.

ಬೆಂಗಳೂರಿನ  ಖಾಸಗಿ ಹೋಟೆಲ್​ನಲ್ಲಿ ಮಾತನಾಡಿದ ಕರವೇ ಯುವಸೇನೆ ಕಾರ್ಯಕರ್ತ ಹರೀಶ್​, ಸನ್ನಿ ಲಿಯೋನ್ ಎಲ್ಲಿಗೆ ಬಂದರೂ ನಾವು ಅವರನ್ನ ತಡೆ ಮಾಡ್ತೀವಿ.  ಇದು ನಮ್ಮ ಸಂಸ್ಕೃತಿ ವಿಚಾರ.  ಹೀಗಾಗಿ ನಾವು ಅದನ್ನ ವಿರೋಧಿಸ್ತೀವಿ.  ಆದ್ರೆ ನಾವು ಕಾರ್ಯಕ್ರಮವನ್ನ ವಿರೋಧ ಮಾಡುತ್ತಿಲ್ಲ. ಬದಲಾಗಿದೆ ಸನ್ನಿ ಲೀಯೊನ್ ಅವರನ್ನ ಮಾತ್ರ ವಿರೋಧಿಸುತ್ತೇವೆ ಎಂದು ತಿಳಿಸಿದ್ರು.

 

 

Leave a Reply

Your email address will not be published.