ಗಜನಿಗೆ ಯಮನಾದ ಖಾಸಗಿ ಬಸ್​ : ಅಪಘಾತದಲ್ಲಿ ದಸರಾ ಆನೆ ‘ರೌಡಿ ರಂಗ’ ದುರ್ಮರಣ…!

ಮಡಿಕೇರಿ : ರೌಡಿ ರಂಗ ಎಂದೇ ಫೇಮಸ್​ ಆಗಿದ್ದ ಆನೆ ದಸರಾದಲ್ಲಿ ಸಹಾಯಕ ಆನೆಯಾಗಿ ತೆರಳಬೇಕಿದ್ದ  ಆನೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಡಿಕೇರಿಯಲ್ಲಿ ಮುಂಜಾನೆ ಸಂಭವಿಸಿದೆ.

ಕೇರಳದ ಕಣ್ಣೂರಿನಿಂದ ಖಾಸಗಿ ಬಸ್​ವೊಂದು ಆವರಣದಲ್ಲಿ  ಮೇಯುತ್ತಿದ್ದ 45 ವರ್ಷದ ರಂಗ ಎಂಬ ಹೆಸರಿನ ಗಂಡಾನೆಗೆ ಡಿಕ್ಕಿ ಹೊಡೆದಿತ್ತು.  ಮೇಯುತ್ತ ಆನೆ ರಂಗ ರಸ್ತೆಗೆ ಆಗಮಿಸಿದ್ದು ಈ ವೇಳೆ  ಬಸ್​ ಆನೆಗೆ ಡಿಕ್ಕಿ ಹೊಡೆದ ಪರಿಣಾಮ ಅನೆಯ ಸೊಂಟದ ಮೂಳೆ  ಮುರಿದುಕೊಂಡಿದ್ದು, ರಂಗ ರಸ್ತೆಯಲ್ಲೇ   ನರಳಾಡುತ್ತಿದ್ದು, ವೈದ್ಯರು ಚಿಕಿತ್ಸೆ ನೀಡಿದ್ರು, ಚಿಕಿತ್ಸೆ ಫಲಕಾರಿಯಾಗದೇ ರೌಡಿ ರಂಗ ಎಂದು ಕರೆಯುತ್ತಿದ್ದ ಆನೆ  ಸಾವನ್ನಪ್ಪಿದೆ. ಈ ಘಟನೆಗೆ ಸಂಬಂಧ  ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಬಸ್​​ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಇನ್ನು ರೌಡಿ ಎಂದು ಫೇಮಸ್​​ ಆಗಿದ್ದ ರಂಗ ತುಂಬಾ ಪುಂಡಾಟ  ನಡೆಸುತ್ತಿದ್ದ. ಇದರಿಂದ ರಂಗನನ್ನು ಆನೆ ಶಿಬಿರದಲ್ಲಿ ಪಳಗಿಸಿ, ಇನ್ನೆರಡು ದಿನ ನಡೆಯಬೇಕಿದ್ದ ನಾಡಹಬ್ಬ ದಸರಾದಲ್ಲಿ  ಭಾಗವಹಿಸಬೇಕಿತ್ತು, ಆದರೆ ವಿಧಿಯಾಟಕ್ಕೆ ರಂಗ ಬಲಿಯಾಯಿತು.

Leave a Reply

Your email address will not be published.

Social Media Auto Publish Powered By : XYZScripts.com