ಖ್ಯಾತ ಬಾಲಿವುಡ್​ ಗಾಯಕ ಕೈಲಾಶ್​ ಖೇರ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ….!

ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳನ್ನು ತಮ್ಮ ವಿಶೇಷ ಧ್ವನಿಯಿಂದ ಫೇಮಸ್​ ಆದ ಬಾಲಿವುಡ್​ನ ಖ್ಯಾತ ಗಾಯಕ ಕೈಲಾಶ್​ ಖೇರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬರುತ್ತಿದ್ದು, ಇಡೀ ಬಿ ಟೌನ್​ ಗೆ ಇದು ಶಾಕಿಂಗ್​ ನ್ಯೂಸ್​ ಎನ್ನಲಾಗುತ್ತಿದೆ.

kailash kher ಗೆ ಚಿತ್ರದ ಫಲಿತಾಂಶ

​ ಬಾಲಿವುಡ್ ಅಂಗಳದಲ್ಲಿ ಸದ್ಯ ತನುಶ್ರೀ ದತ್ತಾ ಸಿಡಿಸಿರುವ ‘ಕಾಸ್ಟಿಂಗ್ ಕೌಚ್’ ಬಾಂಬ್ ದೊಡ್ಡ ಸಂಚಲನ ಸೃಷ್ಟಿಸಿದೆ. ಖ್ಯಾತ ನಟ ನಾನಾ ಪಾಟೇಕರ್, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದೀಗ ಖ್ಯಾತ ಗಾಯಕ ಕೈಲಾಶ್​ ಖೇರ್​ ವಿರುದ್ಧ ಮುಂಬೈನ ಫೋಟೋ ಜರ್ನಲಿಸ್ಟ್ ಯುವತಿಯೊಬ್ಬರು ದೌರ್ಜನ್ಯದ ಆರೋಪ ಮಾಡಿದ್ದಾಳೆ.

kailash kher ಗೆ ಚಿತ್ರದ ಫಲಿತಾಂಶ

ಈ ವಿಷಯ  ಟ್ವಿಟ್ಟರ್ ನಲ್ಲಿ ಕೈಗೊಂಡಿರುವ #Meetoo ಅಭಿಯಾನದ ಹಿನ್ನೆಲೆ ಈ ಸ್ಫೋಟಕ ಸಂಗತಿಯನ್ನ ಬಹಿರಂಗಪಡಿಸಿದ್ದಾರೆ. ಕೈಲಾಶ್​ ನನ್ನು ಸಂದರ್ಶನ ಮಾಡಲು ಬಂದ ನಟಶಾ ಹೇಮ್ರಾಜನ್ ಎಂಬ ಫೋಟೋ ಜರ್ನಲಿಸ್ಟ್ ಹೋಗಿದ್ರು, ಸಂದರ್ಶನದ ವೇಳೆ ನಮ್ಮ ಮಧ್ಯೆ ಕುಳಿತುಕೊಂಡ ಕೈಲಾಶ್ ಖೇರ್ ನನ್ನ ತೊಡೆಯನ್ನ ಗಟ್ಟಿಯಾಗಿ ಹಿಡಿದುಕೊಂಡರು. ನನಗೆ ಭಯವಾಯಿತು. ಬೇಗ ಅಲ್ಲಿಂದ ಸಂದರ್ಶನ ಮುಗಿಸಿಕೊಂಡು ಹೊರಗೆ ಬಂದೆವು ಎಂದು ಬಹಿರಂಗಪಡಿಸಿದ್ದಾರೆ.

 

5 thoughts on “ಖ್ಯಾತ ಬಾಲಿವುಡ್​ ಗಾಯಕ ಕೈಲಾಶ್​ ಖೇರ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ….!

Leave a Reply

Your email address will not be published.

Social Media Auto Publish Powered By : XYZScripts.com