Cricket : ಜಡೇಜಾಗೆ ಚೊಚ್ಚಲ ಶತಕದ ಸಂಭ್ರಮ – ಅಗಲಿದ ತಾಯಿಗೆ ಇನ್ನಿಂಗ್ಸ್ ಅರ್ಪಿಸಿದ ಜಡ್ಡು

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಲ ನಡುವೆ ರಾಜ್ಕೋಟ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ತಮ್ಮ ಚೊಚ್ಚಲ ಅಂತರಾಷ್ಟ್ರೀಯ ಶತಕ ದಾಖಲಿಸಿದರು. ಈ ಶತಕವನ್ನು ಜಡೇಜಾ ತಮ್ಮ ಅಗಲಿದ ತಾಯಿಗೆ ಅರ್ಪಿಸಿದ್ದಾರೆ. ಇದುವರೆಗೆ ಭಾರತದ ಪರವಾಗಿ 37 ಟೆಸ್ಟ್ ಹಾಗೂ 140 ಏಕದಿನ ಪಂದ್ಯಗಳನ್ನಾಡಿರುವ ಜಡೇಜಾಗೆ ಶತಕ ಗಳಿಸುವುದು ಸಾಧ್ಯವಾಗಿರಲಿಲ್ಲ.

ಸೆಂಚುರಿ ಗಳಿಕೆಯ ನಂತರ ಮಾತನಾಡಿದ ಜಡೇಜಾ ‘ ಇದು ನಿಜಕ್ಕೂ ವಿಶೇಷವಾಗಿತ್ತು. ಈ ಹಿಂದೆ ನಾನು 80, 90 ರನ್ ಗಳಿಸಿದ್ದೆ, ಆದರೆ ಶತಕವಾಗಿ ಪರಿವರ್ತಿಸಲು ಸಾಧ್ಯವಾಗಿರಲಿಲ್ಲ. ನಾನು ಈ ಕುರಿತು ಚಿಂತಿನಾಗಿರಲಿಲ್ಲ, ಕೆಟ್ಟ ಹೊಡೆತಕ್ಕೆ ಬಲಿಯಾಗದಿರಲು ನಿರ್ಧರಿಸಿದ್ದೆ. 100 ರನ್ ಗಳಿಸುವ ತನಕ ಇನ್ನಿಂಗ್ಸ್ ಆಡಬೇಕು ಎಂದು ಉಮೇಶ್ ಹಾಗೂ ಶಮಿಗೆ ಹೇಳಿದ್ದೆ. ನನ್ನ ಶತಕ ಪೂರ್ಣಗೊಂಡ ನಂತರ 649ಕ್ಕೆ ಡಿಕ್ಲೇರ್ ಮಾಡಿಕೊಂಡೆವು ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com