‘ಜನರಿಂದಲೇ ಕಲಾವಿದರು ಬೆಳೆಯುತ್ತಾರೆ ಅದರಿಂದ ಜವಾಬ್ದಾರಿಯಿಂದ ಇರಬೇಕು’ : ಪ್ರಕಾಶ್​ ರೈ

ಮೈಸೂರು : ಕಲಾವಿದ ಜನರಿಂದ ಬೆಳೆದಿದ್ದಾರೆ. ಹೀಗಾಗಿ ಕಲಾವಿದ ಜವಾಬ್ದಾರಿಯಿಂದ ಇರಬೇಕು. ಒಂದು ಸ್ಥಾನಕ್ಕೆ ಹೋದ ಮೇಲೆ ಉತ್ತರ ಕೊಡಲೇಬೇಕು. ಅದರಿಂದ ನುಣಿಚಿಕೊಳ್ಳುವ ಪ್ರಯತ್ನ ಮಾಡಬಾರದು ಎಂದು ಮೈಸೂರಿನಲ್ಲಿ ಪ್ರಕಾಶ್​ ರೈ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ  ಮಾತನಾಡಿದ ನಟ ಪ್ರಕಾಶ್ ರೈ, ಜನರಿಂದ ಕಲಾವಿದರು, ಕಲಾವಿದರು ಜವಬ್ದಾರಿಯಿಂದ ಇರಬೇಕು. ಒಂದು ಸ್ಥಾನಕ್ಕೆ ಹೋದ ಮೇಲೆ ಉತ್ತರ ಕೊಡಲೇಬೇಕು. ಅದರಿಂದ ನುಣಿಚಿಕೊಳ್ಳುವ ಪ್ರಯತ್ನ ಉನ್ನತ ಸ್ಥಾನದಲ್ಲಿರುವ ಯಾರಿಂದಲೂ ಆಗಬಾರದು. ಕೆಲವರನ್ನ ಮನುಷ್ಯರು ಅಂದುಕೊಂಡಿದ್ದೇವೆ. ಕೆಲವರನ್ನ ಪ್ರಾಣಿಗಳು ಎಂದು ಕೊಂಡಿರುತ್ತೇವೆ. ಆದ್ರೆ ನಾವಂದುಕೊಂಡಿದ್ದು ಅವು ಆಗಿರೋದೇ ಇಲ್ಲ. ನಮ್ಮ ಊಹೆ ತಪ್ಪಾಗಿದ್ರೆ ಈ ರೀತಿ ಆಗುತ್ತದೆ ಎಂದು ಕನ್ನಡ ನಟರ ವಿವಾದಗಳಿಗೆ ಬಗ್ಗೆ ಮಾತನಾಡಿದ್ರು.

ತಾವೇ ಬರೆದಿರುವ ‘ಅವರವರ ಭಾವಕ್ಕೆ’ ಪುಸ್ತಕ ಬಿಡುಗಡೆ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರೈ  ಮಾಹಿತಿ ನೀಡಿದರು. ಅ.7 ರಂದು ಮಾನಸ ಗಂಗೋತ್ರಿಯ ಮಾನವಿ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಮಾಡಲಾಗುವುದು. ನನ್ನ ಮೊದಲ ಪುಸ್ತಕವನ್ನ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದೆ. ಎರಡನೇ ಪುಸ್ತಕವನ್ನ ಮೈಸೂರಿನಲ್ಲಿ ಬಿಡುಗಡೆ ಮಾಡುತ್ತಿದ್ದೇನೆ. ನಾನು ಹೇಳುವುದನ್ನ ಬರೆಯಲು ಗೆಳೆಯರು ಹೇಳಿದ್ರು. ಹೀಗಾಗಿ ನನಗೆ ಅನಿಸಿದ್ದನ್ನ ಬರೆಯಲು ಮುಂದಾದೆ. ಈಗ ಬರೆಯದೆ ಇರಲು ಆಗುತ್ತಿಲ್ಲ. ನಾನು‌ ಬಹುಭಾಷಾ ನಟನಾಗಿದ್ದೇನೆ. ಎಲ್ಲಾ ಭಾಷೆಗಳಲ್ಲಿ ಬರೆಯಲು ಸಿದ್ದತೆ ಇದೆ ಎಂದರು.

 

 

Leave a Reply

Your email address will not be published.

Social Media Auto Publish Powered By : XYZScripts.com