ಪರಿಷತ್​ ಸದಸ್ಯತ್ವ : ಮಲ್ಲಿಕಾರ್ಜುನ್​ ಖರ್ಗೆ ಮೇಲುಗೈ, ಸಿದ್ದರಾಮಯ್ಯಗೆ ಹಿನ್ನಡೆ….!

ಬೆಂಗಳೂರು : ವಿಧಾನ ಪರಿಷತ್​ಗೆ ಇಬ್ಬರನ್ನು ನಾಮನಿರ್ದೇಶನ ಮಾಡಬೇಕಿದೆ.  ಈ ಪೈಪೋಟಿಯಲ್ಲಿ  ಹಲವು ರಾಜಕಾರಣಿಗಳು ಲಾಭಿ ನಡೆಸಿದ್ದರು. ತಮ್ಮ ಆಪ್ತರಿಗೆ ಪರಿಷತ್​ ಸದಸ್ಯತ್ವವನ್ನು ಕೊಡಿಸುವಲ್ಲಿ  ಖರ್ಗೆ ಹಾಗೂ ಸಿದ್ದರಾಮಯ್ಯ ತೀವ್ರ ಪೈಪೋಟಿ ನಡೆಸಿದ್ದಾರೆ.

ಹಲವು ರಾಜಕಾರಣಿಗಳು ಲಾಭಿ ನಡೆಸಿದ್ದರು. ಈ ಪೈಪೋಟಿಯಲ್ಲಿ ಕೊನೆಗೂ ತಮ್ಮ ಆಪ್ತನಿಗೆ ಪರಿಷತ್ ಸದಸ್ಯತ್ವ ಕೊಡಿಸುವ ಮೂಲಕ ಕಾಂಗ್ರೆಸ್​ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮೇಲುಗೈ ಸಾಧಿಸಿದ್ದಾರೆ. ಸಿದ್ದರಾಮಯ್ಯನವರಿಗೆ  ಹಿನ್ನಡೆಯಾಗಿದೆ. ಈ ಎರಡು ಸ್ಥಾನಗಳಿಗೆ ಪ್ರಕಾಶ ರಾಥೋಡ, ಮುಖ್ಯಮಂತ್ರಿ ಚಂದ್ರು, ಬರಗೂರು ರಾಮಚಂದ್ರಪ್ಪ, ಯು ಬಿ ವೆಂಕಟೇಶ ಸೇರಿದಂತೆ ಒಟ್ಟು ಆರು ಮಂದಿ ತೀವ್ರ ಲಾಭಿ ನಡೆಸಿದ್ದರು.

ಕೊನೆಯದಾಗಿ ಖರ್ಗೆ ಅವರು ತಮ್ಮ ಆಪ್ತ ಯು ಬಿ ವೆಂಕಟೇಶ ಹೆಸರು ಫೈನಲ್​ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ನವರ ಆಪ್ತ ಮುಖ್ಯಮಂತ್ರಿ ಚಂದ್ರುಗೆ ಸ್ಥಾನ ಕೊಡಿಸುವಲ್ಲಿ ವಿಫಲರಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com