‘ತಾಯಿ ಮೇಲೆ ಆಣೆ ನಾನು ಥಿಯೇಟರ್​ಗೆ ಬರಲ್ಲ’ : ಅಭಿಮಾನಿಗಳಿಗೆ ಶಿವಣ್ಣನ ಖಡಕ್​ ವಾರ್ನಿಂಗ್​…!

ಬೆಂಗಳೂರು : ಹ್ಯಾಟ್ರಿಕ್  ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಸಿನಿಮಾ ಅಕ್ಟೋಬರ್ 18 ರಂದು ಬಿಡುಗಡೆಯಾಗುತ್ತಿದೆ. ಆದರೆ ಶಿವಣ್ಣ ಅಭಿಮಾನಿಗಳ ಮೇಲೆ ಬೇಸರಗೊಂಡು ತಾಯಾಣೆ ನಾನು ಥಿಯೇಟರ್​ಗೆ ಬರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಎಲ್ಲರ ಅಭಿಮಾನಿಗಳಿಗೂ ಹೇಳೋದು ಒಂದೇ

ಬಹುನಿರೀಕ್ಷಿತ ಸುದೀಪ್​, ಶಿವರಾಜಕುಮಾರ, ನಟಿಸಿರುವ ಪ್ರೇಮ್​ ನಿರ್ದೇಶಿಸಿರುವ ಚಿತ್ರ ದಿ ವಿಲನ್​ ಅ. 18ಕ್ಕೆ ಬಿಡುಗಡೆಯಾಗಿದ್ದು. ಚಿತ್ರತಂಡ ಸಿನಿಮಾದ ಪ್ರೋಮೊಷನ್​ ನಲ್ಲಿ ತೊಡಗಿದ್ದ ವೇಳೆ  ಮಾತನಾಡಿದ ಶಿವಣ್ಣ, ”ಬೇರೆ ರೀತಿ ಗಲಾಟೆಗಳನ್ನು ಮಾಡಬೇಡಿ. ಥಿಯೇಟರ್‌ನಲ್ಲಿ ಏನಾದರೂ ಗಲಾಟೆ ಮಾಡಿದರೆ ‘ತಾಯಾಣೆ’ ನಾನು ಥಿಯೇಟರ್ ಗೆ ಬರಲ್ಲ. ‘ನಾನು ತಾಯಾಣೆ ಇಟ್ರೆ’ ಖಂಡಿತಾ ಹಾಗೆ ನಡೆದುಕೊಳ್ಳೋದು. ಅದು ಎಲ್ಲರಿಗೂ ಗೊತ್ತು. ಒಂದೇ ಒಂದು ಗಲಾಟೆ ಆದ್ರೂ ಮತ್ತೆ ನಾನು ಚಿತ್ರಮಂದಿರಕ್ಕೆ ಬರಲ್ಲ”  ಎಂದು ಕೋಪದಿಂದ ಶಿವಣ್ಣ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ರು.

ಸಾಮಾನ್ಯವಾಗಿ ಶಿವಣ್ಣ ಅವರ ಪಾತ್ರಕ್ಕೆ ವಿಲನ್ ಗಳು ಬೈಯ್ದರನೇ ಸಹಿಸಿಕೊಳ್ಳುವುದಿಲ್ಲ ಶಿವಣ್ಣನ ಫ್ಯಾನ್ಸ್. ಇನ್ನು ವಿಲನ್ ಸಿನಿಮಾದಲ್ಲಿ ಏನಾದರೂ ವ್ಯತ್ಯಾಸವಾದರೇ ದೊಡ್ಡ ಯುದ್ಧವೇ ಆಗಿಬಿಡಬಹುದು ಎಂಬ ಮಾತಿದೆ. ಇದು ಸ್ವತಃ ಶಿವಣ್ಣನ ಗಮನಕ್ಕೂ ಬಂದಿದ್ದು, ತಾಯಿ ಮೇಲೆ ಆಣೆಯಿಟ್ಟು ಖಡಕ್ ಎಚ್ಚರಿಕೆ ನೀಡಿದ್ದಾರೆ ಕರುನಾಡ ಚಕ್ರವರ್ತಿ.

 

 

Leave a Reply

Your email address will not be published.