ಪತ್ನಿ ಜೊತೆ ಚಾಮುಂಡಿ ತಾಯಿ ದರ್ಶನ ಪಡೆದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​…!

ಮೈಸೂರು : ಕಾರು ಅಪಘಾತದಲ್ಲಿ ತನ್ನ ಬಲ ಕೈ ಮುರಿದುಕೊಂಡಿದ್ದ ದರ್ಶನ್​ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚರ್ಜ್​ ಆಗಿದ್ದಾರೆ. ತನ್ನ ಪತ್ನಿ ವಿಜಯಲಕ್ಷ್ಮೀ ಜೊತೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮೊದಲು ಮೈಸೂರು ಚಾಮುಂಡಿ ದರ್ಶನಕ್ಕೆ ತೆರಳಿದ್ದಾರೆ.

ಕಾರು ಅಪಘಾತದಿಂದ ಸುಮಾರು ಒಂದು ವಾರ ಆಸ್ಪತ್ರೆಯಲ್ಲಿದ ದರ್ಶನ ಡಿಸ್ಚಾರ್ಜ್​ ಆಗಿದ ತಕ್ಷಣ ಚಾಮುಂಡಿ ಬೆಟ್ಟಕ್ಕೆ ತೆರಳಿ, ತಾಯಿಯ ದರ್ಶನ ಪಡೆದ್ರು. ಇಂದು ತಾಯಿಯ ದರ್ಶನ ಪಡೆದು ಚಾಮುಂಡೇಶ್ವರಿ ದೇವಸ್ಥಾನದ ಪ್ರದಾನ ಅರ್ಚಕರಾದ ಶಶಿಶೇಖರ್ ​ದೀಕ್ಷಿತ್​  ಅವರ ಆರೋಗ್ಯವನ್ನು ವಿಚಾರಿಸಿದ್ರು.

ಇನ್ನು ಅಪಘಾತದಲ್ಲಿ ದೇವರಾಜ್​ ಹಾಗೂ ಪ್ರಜ್ವಲ್​ಗೂ ಕೂಡ ಗಾಯಗಳಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ದರ್ಶನ್​ಗೆ ಬಲಗೈಗೆ ಮುರಿದಿದ್ದು, ಪ್ಲೇಟ್​ ಅಳವಡಿಸಿದ್ದಾರೆ. ದರ್ಶನ್​ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ರು.

Leave a Reply

Your email address will not be published.

Social Media Auto Publish Powered By : XYZScripts.com