ಖ್ಯಾತ ಸಂಗೀತ ನಿರ್ದೇಶಕ, ವಯೋಲಿನ್​ ವಾದಕ ಬಾಲಭಾಸ್ಕರ್​ ವಿಧಿವಶ…!

ತಿರುವನಂತಪುರ : ರಸ್ತೆ ಅಪಘಾತದಲ್ಲಿ ಗಂಭೀರಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಖ್ಯಾತ ವಯೋಲಿನ್​ ವಾದಕ, ಮಾಲೆಯಾಳಿ ಸಂಗೀತ ನಿರ್ದೇಶಕ ಬಾಲಭಾಸ್ಕರ್​ ಇಂದು ಚಿಕಿತ್ಸೆ ಫಲಿಸದೇ ಕೊನೆಯೂಸಿರೆಳೆದಿದ್ದಾರೆ.

ಸಂಬಂಧಿತ ಚಿತ್ರ

ಸೆಪ್ಟಂಬರ್​ 25ರಂದು ತಿರುವಂತಪುರಂನಲ್ಲಿ ಕುಟುಂಬ ಸಮೇತ ತಿರುವನಂತಪುರದ ಪಲ್ಲಿಪ್ಪುರಂ ಬಳಿ ನಿಯಂತ್ರಣ ಕಳೆದುಕೊಂಡ ಕಾರು ಮರಕ್ಕೆ ಡಿಕ್ಕಿ ಹೊಡೆದಿತ್ತು ಅಪಘಾತಕ್ಕಿಡಾಗಿದ್ರು, ಈ ಅಪಘಾತದಲ್ಲಿ ತನ್ನ 2 ವರ್ಷದ  ಮಗಳು  ತೇಜಸ್ವಿನಿಯನ್ನು  ಕೆಳದುಕೊಂಡರು, ಭಾಸ್ಕರ್​, ಪತ್ನಿ ಲಕ್ಷ್ಮೀ ಮತ್ತು ಚಾಲಕ ಅರ್ಜುನ್ ಅವರಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯೂಸಿರೆಳೆದಿದ್ದಾರೆ

Leave a Reply

Your email address will not be published.

Social Media Auto Publish Powered By : XYZScripts.com