ಧರ್ಮಸ್ಥಳಕ್ಕೆ ಪವರ್​ಸ್ಟಾರ್​ ಪುನೀತ್​ ಭೇಟಿ : ಭಜನಾ ಕಾರ್ಯಕ್ರಮದಲ್ಲಿ ರಾಯರ ಕೀರ್ತನೆ ಹಾಡಿದ ಅಪ್ಪು

ನಟ ಹಾಗೂ ನಿರ್ಮಾಪಕ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. 20ನೇ  ವರ್ಷದ ಭಜನಾ ಕಮ್ಮಟ ಸಮಾರೋಪದಲ್ಲಿ ಅಪ್ಪು ಪಾಲ್ಗೊಂಡಿದ್ದಾರೆ.

ಏಳು ದಿನಗಳ ನಡೆಯುವ ಈ ಕಾರ್ಯಕ್ರಮದಲ್ಲಿ 300 ಭಜನಾ ತಂಡಗಳು ಭಾಗವಹಿಸಿದ್ದವು. ಸಮಾರೋಪದಲ್ಲಿ 3 ಸಾವಿರಕ್ಕೂ ಹೆಚ್ಚು ಭಜನಾ ಪಟುಗಳಿಂದ ಭಜನೆಯೊಂದಿಗೆ  ಶೋಭಾಯಾತ್ರೆ  ಅದ್ದೂರಿಯಾಗಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭೇಟಿ ನೀಡಿದ ಅಪ್ಪು ಮುಖ್ಯ ಆಕರ್ಷಣೆಯಾಗಿದ್ರು.

ಧರ್ಮಸ್ಥಳ, ಧರ್ಮಧಿಕಾರಿ ವೀರೇಂದ್ರ ಹೆಗ್ಡೆ ಜೊತೆ ಅಪ್ಪು ಮಾತನಾಡಿ. ನಂತರ ಕಾರ್ಯಕ್ರಮದಲ್ಲಿ ಭಜನ ತಂಡದ ಜೊತೆಗೆ ರಾಯರ  ಕೀರ್ತನೆಯನ್ನು ಅಪ್ಪು ಹಾಡಿದ್ರು, ಜೊತೆ ತಂದೆ ರಾಜಕುಮಾರ ಅವರ ಜೊತೆ ಧರ್ಮಸ್ಥಳದಲ್ಲಿ ಕಳೆದ ನವಿ ನೆನಪನ್ನು ಹಂಚಿಕೊಂಡ್ರು.

ಧರ್ಮಸ್ಥಳದ ನನ್ನ ಹಾಗೂ ಅಪ್ಪಾಜಿಯ ನಂಟು, ನೆನೆಪು ಸಾಕಷ್ಟು ಇದೆ. ಇಲ್ಲಿ ಚಿತ್ರೀಕರಣ ಮಾಡುವಾಗ ನನ್ನ ತಂದೆ ಜೊತೆ ಬಂದ ನೆನೆಪಿದೆ ಹಾಗೂ ಮಂಜುನಾಥನ ಆಶೀರ್ವಾದ ಪಡೆಯೋಕೆ ಪ್ರತಿ ಎರಡು ವರ್ಷಕ್ಕೊಮ್ಮೆ ಬರುತ್ತೇನೆ. ಆದರೆ ಸಾಂಸ್ಕೃತಿಕ, ಭಜನಾ ಕಾರ್ಯಕ್ರಮಕ್ಕೆ ಬಂದಿದ್ದು ಇದೇ ಮೊದಲ ಬಾರಿ ಬಂದಿದ್ದು ಎಂದು ಅಪ್ಪು ತಿಳಿಸಿದ್ರು.

 

Leave a Reply

Your email address will not be published.

Social Media Auto Publish Powered By : XYZScripts.com