ಇದು ಕಾಟಾಚಾರದ ಉದ್ಯೋಗ ಮೇಳ ಅಲ್ಲ, ಕೆಲಸ ಸಿಗಲಿಲ್ಲ ಅಂದರೆ ಮರಳಿ ಯತ್ನ ಮಾಡಿ : CM HDK

ಬೆಂಗಳೂರು : ಇಂದು ಮತ್ತು ನಾಳೆ ಬೆಂಗಳೂರಿನ  ಬಸವನಗುಡಿಯಲ್ಲಿ ಉದ್ಯೋಗ ಮೇಳವಿದ್ದ ಎಲ್ಲಾರೂ ಪ್ರಯತ್ನಿಸಿ ಉದ್ಯೋಗ ಸಿಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ರು.

ಇದು ಕಾಟಾಚಾರದ ಉದ್ಯೋಗ ಮೇಳ ಅಲ್ಲ, ಯಾರಿಗಾದರೂ ಉದ್ಯೋಗ ಸಿಗಲಿಲ್ಲ ಅಂದರೆ ಮರಳಿ ಯತ್ನಿಸಿ, ಉದ್ಯೋಗ ಸಿಕ್ಕೇಸಿಗುತ್ತದೆ, ರಾಜ್ಯದ ಎಲ್ಲ ಕುಟುಂಬಗಳೂ ನೆಮ್ಮದಿಯ ಬದುಕು ಸಾಗಿಸಬೇಕೆನ್ನುವುದು ನಮ್ಮ ಸರಕಾರದ ಗುರಿ, ಒಂಭತ್ತು ಜಿಲ್ಲೆಗಳಲ್ಲಿ ಒಂಭತ್ತು ಕ್ಲಸ್ಟರ್ ಗಳನ್ನು ರಚಿಸಲು ನಿರ್ಧಾರ ಮಾಡಿದ್ದೇವೆ, ಒಂದೊಂದು ಜಿಲ್ಲೆಯಲ್ಲಿ ಒಂದು ಲಕ್ಷ ಉದ್ಯೋಗ ಕೊಡುವ ಗುರಿ ಇದೆ, ಇದಕ್ಕಾಗಿ ವಿಜನ್ ಗ್ರೂಪ್ ರಚಿಸಿ ಕಾರ್ಯತತ್ಪರವಾಗಿದ್ದೇವೆ, ಈ ಸರಕಾರ ಆಗಲೋ ಈಗಲೋ ಬಿದ್ದುಹೋಗುತ್ತೆ ಅಂತ ಟೀಕೆ ಮಾಡ್ತಿದ್ದಾರೆ, ಆದರೆ ನಮ್ಮ ಸರಕಾರ ಸುಭದ್ರವಾಗಿದೆ, ದೂರದೃಷ್ಟಿಯಿಂದ ಹಲವು ಕಾರ್ಯಕ್ರಮಗಳನ್ನು ನಮ್ಮ ಸರಕಾರ ಹಾಕಿಕೊಂಡಿದೆ ಎಂದು ಉದ್ಯೋಗಮೇಳದಲ್ಲಿ ಸಿಎಂ ಕುಮಾರಸ್ವಾಮಿ  ತಿಳಿಸಿದ್ರು.

today job mela ಗೆ ಚಿತ್ರದ ಫಲಿತಾಂಶ

ಉದ್ಯೋಗ ಮೇಳದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಉದ್ಯೋಗಾಕಾಂಕ್ಷಿಗಳು ಈ ಮೇಳಕ್ಕೆ ಬಹಳ ನಿರೀಕ್ಷೆ ಇಟ್ಟು ಬಂದಿದ್ದಾರೆ, ಕೊಡಗು, ದೂರದ ಬಿದರ್ ಸೇರಿ ಹಲವು ಜಿಲ್ಲೆಗಳಿಂದ ಬಂದಿದ್ದಾರೆ, ಉದ್ಯೋಗಮೇಳಕ್ಕೆ ಬಂದಿರುವ ಕಂಪೆನಿಗಳಿಗೆ ಕೃತಜ್ಞತೆಗಳು, ಮೈತ್ರಿ ಸರಕಾರ ಬಂದ ಬಳಿಕ ಎರಡು ಅಧಿಕೃತ ಜನತಾ ದರ್ಶನ ನಡೆಸಿದ್ದೇನೆ, ಜನತಾ ದರ್ಶನದಲ್ಲಿ‌ ಬಂದಿರುವ ಅರ್ಜಿಗಳನ್ನು ನಮ್ಮ ಸರಕಾರ ಲಘುವಾಗಿ ಪರಿಗಣಿಸಿಲ್ಲ ಎಂದು ಸಿಎಂ ಹೇಳಿದ್ರು.

ಇನ್ನ ಮೇಳದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆ, ಇಡೀ ದೇಶದಲ್ಲಿ ಬಂಡವಾಳ ಹೂಡಿಕೆಯಲ್ಲಿ ನಮ್ಮ ರಾಜ್ಯ ನಂಬರ್ ಒನ್.ಆದರೆ ಉದ್ಯೋಗ ಸೃಷ್ಟಿಯೇ ದೊಡ್ಡ ಸಮಸ್ಯೆ ಆಗಿದೆ. ಉದ್ಯೋಗ ಇಲ್ಲ ಅಂತಲ್ಲ. ಉದ್ಯೋಗ ಇದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ಯೋಗ ಸೃಷ್ಡಿಗೆ ಮುಂದಾಗಬೇಕು. ಅದರಲ್ಕೂ ಜನತಾ ದರ್ಶನದಲ್ಕಿ ಭಾರಿ ಸಂಖ್ಯೆಯ ಜನ ಉದ್ಯೋಗ ಕೇಳಿಕೊಂಡು ಬರುತ್ತಿದ್ದರು. ಹಾಗಾಗಿಯೇ ಈ ಉದ್ಯೋಗ ಮೇಳವನ್ಬು ಆಯೋಜಿಸಲಾಯ್ತು. ಎಂದು ತಿಳಿಸಿದ್ರು.

hd kumaraswamy ಗೆ ಚಿತ್ರದ ಫಲಿತಾಂಶ

ಎರಡು ದಿನಗಳ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ್ದು, ಸಿಎಂ ಕುಮಾರಸ್ವಾಮಿ, ಸಚಿವ ಆರ್.ವಿ.ದೇಶಪಾಂಡೆ, ಸಂಸದ ವೀರಪ್ಪ ಮೊಯಿಲಿ, ಶಾಸಕ ಉದಯ್ ಗರುಡಾಚಾರ್, ಶಾಸಕಿ ಸೌಮ್ಯ ರಾಮಲಿಂಗಾರೆಡ್ಡಿ, ಎಮ್ಮೆಲ್ಸಿ ಶರವಣ, ಜಿಲ್ಲಾಧಿಕಾರಿ ವಿಜಯ್ ಶಂಕರ್ ಉಪಸ್ಥಿತಿ.

Leave a Reply

Your email address will not be published.

Social Media Auto Publish Powered By : XYZScripts.com