Asia Cup 2018 : ಫೈನಲ್ ಸ್ಥಾನಕ್ಕಾಗಿ ಪಾಕ್ – ಬಾಂಗ್ಲಾ ತಂಡಗಳ ಫೈಟ್

ಅಬುಧಾಬಿಯ ಶೇಖ್ ಜಾಯೇದ್ ಕ್ರಿಕೆಟ್ ಮೈದಾನದಲ್ಲಿ ಬುಧವಾರ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ಏಷ್ಯಾಕಪ್ – 2018 ಟೂರ್ನಿಯ ಸೂಪರ್ – 4 ಹಂತದ ಪಂದ್ಯ ನಡೆಯಲಿದೆ. ಈ ಮ್ಯಾಚ್ ನಲ್ಲಿ ಜಯ ಸಾಧಿಸಿದ ತಂಡ ಏಷ್ಯಾಕಪ್ ಟ್ರೋಫಿಗಾಗಿ ಭಾರತದೊಂದಿಗೆ ಫೈನಲ್ ನಲ್ಲಿ ಸೆಣಸಾಡಲಿದೆ.

ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಸೂಪರ್ – 4 ಹಂತದ ಪಂದ್ಯಗಳಲ್ಲಿ ಭಾರತದ ವಿರುದ್ಧ ಸೋತು ಅಫಘಾನಿಸ್ತಾನದ ವಿರುದ್ಧ ಜಯ ಗಳಿಸಿವೆ. ತಲಾ 2 ಅಂಕಗಳೊದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಕ್ರಮವಾಗಿ ಎರಡು ಹಾಗೂ ಮೂರನೇ ಕ್ರಮಾಂಕದಲ್ಲಿರುವ ಪಾಕಿಸ್ತಾನ & ಬಾಂಗ್ಲಾ ತಂಡಗಳಿಗೆ ಇಂದಿನ ಮ್ಯಾಚ್ ಮಾಡು ಇಲ್ಲವೆ ಮಡಿ ಎನ್ನುವಂತಾಗಿದೆ.

Leave a Reply

Your email address will not be published.