ಪದೇ ಪದೇ ರೈತರಿಗೆ ನೋಟೀಸ್ ಕೊಟ್ರೆ ಅವ್ರ ವಿರುದ್ಧ FIR ದಾಖಲಾಗುತ್ತದೆ : ಬ್ಯಾಂಕ್ ಅಧಿಕಾರಿಗಳಿಗೆ CM ತರಾಟೆ

ಬೆಂಗಳೂರು : ಪದೇ ಪದೇ ಎದರಿಸುವ ಕೆಲಸ ಮಾಡಿದ್ರೆ ಬೆಲೆ ತೆರಬೇಕಾಗುತ್ತೆ, ರೈತರ ಜೊತೆ ಚೆಲ್ಲಾಟ ಆಡೋದು ಸರಿಯಿಲ್ಲ, ಇಷ್ಟು ದಿನ ಸುಮ್ಮನಿದ್ದು ಈಗ ಯಾಕೆ ತೊಂದರೆ ಕೊಡ್ತೀರಿ ಎಂದು ಸಾಲಮನ್ನಾ ಕುರಿತು ಬ್ಯಾಂಕ್ ಮುಖ್ಯಸ್ಥರಿಗೆ ಸಿಎಂ ತರಾಟೆ ತೆಗೆದುಕೊಂಡಿದ್ದಾರೆ.

cm hdk farmers loan clear ಗೆ ಚಿತ್ರದ ಫಲಿತಾಂಶ

ಸಾಲಮನ್ನಾ ಕುರಿತ ಪ್ರಗತಿ ಪರಿಶೀಲನಾ ಸಭೆ ಬಳಿಕ ನಡೆದ ಸಿಎಂ ಸುದ್ದಿಗೋಷ್ಟಿ ನಡೆಸಿದ್ರು. ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ ಸಾಲ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಿದ ಸಿಎಂ, ಸರ್ಕಾರ ಕೂಡ ಆದೇಶ ಹೊರಡಿಸಿದೆ, ಈ ಹಿನ್ನೆಲೆಯಲ್ಲಿ ಎರಡು ಸಮಿತಿ ರಚನೆ ಮಾಡಿದ್ವಿ, ಗೈಡ್ ಲೈನ್ಸ್ ಸಿದ್ದಪಡಿಸುವ ಬಗ್ಗೆ ಸೂಚನೆ ನೀಡಲಾಗಿತ್ತು, ರೈತರ ಸಾಲ ಬಗ್ಗೆ ಸಂಪೂರ್ಣ ಮಾಹಿತಿ ಕೇಳಿದ್ವಿ, ಕುಟುಂಬದಲ್ಲಿ ಎಷ್ಟು ಜನ ಸಾಲ ಮನ್ನಾ ಮಾಡಿದ್ದಾರೆ ಅಂತ ಮಾಹಿತಿ ಪಡೆಯಲು ಸೂಚನೆ ನೀಡಿದ್ವಿ, ರೈತರಿಂದಲೇ ಸಾಲ ಬಗ್ಗೆ ಮಾಹಿತಿ ಪಡೆದಿದ್ದೇವೆ ಎಂದು ಸಿಎಂ ತಿಳಿಸಿದ್ರು.

ಇನ್ನ ರೈತರು ಯಾವ್ಯಾವ ಬ್ಯಾಂಕ್ ಗಳಲ್ಲಿ ಸಾಲ ತೆಗೆದುಕೊಂಡಿದ್ದಾನೆ ಅಂತ ಮಾಹಿತಿ ನೋಡಲು ಬ್ಯಾಂಕ್ ಗಳಿಗೆ ನೋಟೀಸ್ ನೀಡಿದ್ವಿ, ಶನಿವಾರ ರಾಷ್ಟ್ರೀಕೃತ ಬ್ಯಾಂಕ್ ಮುಖ್ಯಸ್ಥರ ಸಭೆ ಸಿಎಸ್ ನೇತೃತ್ವದಲ್ಲಿ ಕರೆಯಲಾಗಿದೆ. 6500 ಕೋಟಿ ಹಣವನ್ನ ಬಿಡುಗಡೆ ಮಾಡಿದ್ದೇವೆ, ತಕ್ಷಣ ಮಾಹಿತಿ ಕೊಡುವ ಬ್ಯಾಂಕ್ ಗಳಿಗೆ ಸಾಲ ಬಿಡುಗಡೆ ಪ್ರೊಸೆಸ್ ಆಗಲಿದೆ, ರಾಜ್ಯೋತ್ಸವ ದಿನದಿಂದಲೇ ಪ್ರೊಸೆಸ್ ಶುರುವಾಗಲಿದೆ, ಎರಡು ಲಕ್ಷಗಳ ವರೆಗೆ ಸಾಲ ಮನ್ನಾ ಹಾಗೂ 25 ಸಾವಿರ ಇನ್ಸೆಂಟಿವ್ ನೀಡಲು ತೀರ್ಮಾನ  ಮಾಡಿದ್ದೇವೆ ಎಂದು ಸಿಎಂ ತಿಳಿಸಿದ್ರು.

ಸಂಬಂಧಿತ ಚಿತ್ರ

ಬ್ಯಾಂಕ್ ಗಳಿಂದ ವಕೀಲರ ಮೂಲಕ ರೈತರಿಗೆ ನೋಟೀಸ್ ನೀಡಿರೋದು ನೋಡಿದ್ದೇನೆ, ಸಮಯಾವಕಾಶ ಕೇಳಿದ್ರೂ ನೋಟೀಸ್ ನೀಡಿದ್ದಾರೆ, ಯಾವುದೇ ಬ್ಯಾಂಕ್ ಗಳಿಂದ ಪುನಃ ಪುನಃ ನೋಟೀಸ್ ಕೊಟ್ರೆ ರೈತರಿಂದ ಕಂಪ್ಲೇಂಟ್ ಬರೆಯಿಸಿಕೊಳ್ಳಲಾಗುವು, ಯಾರು ನೋಟೀಸ್ ಕೊಡ್ತಾರೋ ಅವ್ರ ವಿರುದ್ದ ಎಫ್ ಐ ಆರ್ ದಾಖಲು ಮಾಡಲು ಸೂಚಿಸಿದ್ದೇನೆ, ಪದೇ ಪದೇ ಎದರಿಸುವ ಕೆಲಸ ಮಾಡಿದ್ರೆ ಬೆಲೆ ತೆರಬೇಕಾಗುತ್ತೆ, ರೈತರ ಜೊತೆ ಚೆಲ್ಲಾಟ ಆಡೋದು ಸರಿಯಿಲ್ಲ, ಎಂದು ಬ್ಯಾಂಕ್ ಮುಖ್ಯಸ್ಥರಿಗೆ ಸಿಎಂ ತರಾಟೆ ತೆಗೆದುಕೊಂಡರು.

cm hdk farmers loan clear ಗೆ ಚಿತ್ರದ ಫಲಿತಾಂಶ

ಸಾಲ ಮನ್ನಾ ಮಾಡಿರುವ ರಾಜ್ಯಗಳಿಗೆ ಅಧಿಕಾರಿಗಳ ತಂಡ ಕಳುಹಿಸಲಾಗುವುದು, ಅಲ್ಲಿನ ಮಾನದಂಡ ಅಳವಡಿಕೆ ಬಗ್ಗೆ ಪರಿಶೀಲನೆ ಮಾಡ್ತೇವೆ, ಪ್ರತೀ ನಾಡ ಕಚೇರಿ, ತಾಲೂಕು ಕಚೇರಿಯಲ್ಲಿ ಸಾಲ ಮನ್ನಾ ಮಾನದಂಡ ಪ್ರಕಟ, ಕೇಂದ್ರ ಸರ್ಕಾರದ ಸಹಕಾರ ಇಲ್ಲದಿದ್ರೂ ದೊಡ್ಡ ಮಟ್ಟದ ಸಾಲ ಮನ್ನಾ ಮಾಡಿದ್ದೇವೆ, ಸಾಲ ಮನ್ನಾ ಯೋಜನೆ ಮಿಸ್ ಯೂಸ್ ಆಗಬಾರದು, ರೈತರಿಂದಲೇ ಸಾಲ ಬಗ್ಗೆ ಮಾಹಿತಿ ಪಡೆಯುತ್ತೇವೆಂದು ಸಿಎಂ ಭರವಸೆ ನೀಡಿದ್ದಾರೆ.

Leave a Reply

Your email address will not be published.