ಬ್ಯಾಡ್ಮಿಂಟನ್ ಆಟಗಾರ ಪಿ. ಕಶ್ಯಪ್ ವರಿಸಲಿರುವ ಸೈನಾ : ಡಿಸೆಂಬರ್ ನಲ್ಲಿ ಮುಹೂರ್ತ ಫಿಕ್ಸ್..?

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಮುಂಬರುವ ಡಿಸೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಓಲಿಂಪಿಕ್ ಪದಕ ವಿಜೇತೆ ಹೈದರಾಬಾದ್ ಮೂಲದ ಸೈನಾ ನೆಹ್ವಾಲ್, ಬ್ಯಾಡ್ಮಿಂಟನ್ ಆಟಗಾರ ಪಿ. ಕಶ್ಯಪ್ ಅವರನ್ನು ವರಿಸಲಿದ್ದಾರೆ. ಮೂಲಗಳ ಪ್ರಕಾರ ಇದೇ ವರ್ಷ ಡಿಸೆಂಬರ್ 16ಕ್ಕೆ ಬ್ಯಾಡ್ಮಿಂಟನ್ ಸ್ಟಾರ್ ಜೋಡಿಯ ವಿವಾಹಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ.

Image result for saina nehwal p kashyap marriage

ಮದುವೆ ಸಮಾರಂಭ ಅತ್ಯಂತ ಖಾಸಗಿಯಾಗಿ ನೆರವೇರಲಿದ್ದು, ಎರಡೂ ಕುಟುಂಬದ ಪರಿವಾರದ ಸದಸ್ಯರು, ಬಂಧುಗಳು ಹಾಗೂ ಆಪ್ತ ಸ್ನೇಹಿತರು ಪಾಲ್ಗೊಳ್ಳಲಿದ್ದಾರೆ. ಆ ಬಳಿಕ ಡಿಸೆಂಬರ್ 21 ರಂದು ಅದ್ದೂರಿ ರಿಸೆಪ್ಷನ್ ನಡೆಯಲಿದೆ.

Related image

ಸೈನಾ ನೆಹ್ವಾಲ್, ಪಾರುಪಳ್ಳಿ ಕಶ್ಯಪ್ ಅವರನ್ನು ಮೊಟ್ಟ ಮೊದಲ ಬಾರಿಗೆ ಪುಲ್ಲೇಲ ಗೋಪಿಚಂದ್ ಅವರ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಭೇಟಿಯಾಗಿದ್ದರು. ಸೈನಾ ಹಾಗೂ ಕಶ್ಯಪ್ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ 2005ರಿಂದ ತರಬೇತಿ ಪಡೆಯುತ್ತಿದ್ದಾರೆ.

Leave a Reply

Your email address will not be published.