ಸರ್ಕಾರಿ ಸೌಲಭ್ಯಗಳಿಗೆ ಮಾತ್ರ ಆಧಾರ್​ ಕಡ್ಡಾಯ, ಖಾಸಗಿಗಲ್ಲ : ಷರತ್ತುಗಳೊಂದಿಗೆ ಸುಪ್ರೀಂ ತೀರ್ಪು

ತೀವ್ರ ಕುತೂಹಲ ಮೂಡಿಸಿದ ಆಧಾರ್ ಸಿಂಧುತ್ವ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಸರ್ಕಾರಿ ಯೋಜನೆಗಳಿಗೆ ಮಾತ್ರ ಆಧಾರ್​ ಜೋಡಣೆ ಮಾಡುವಂತೆ ಸುಪ್ರೀಂಕೋರ್ಟ್​ ತನ್ನ ಅಂತಿಮ ತೀರ್ಪಿನಲ್ಲಿ ಘೋಷಣೆ ಮಾಡಿದೆ.
ಆಧಾರ್​ ಕಾರ್ಡ್​ ಮಾನ್ಯತೆಗೆ ಸುಪ್ರೀಂ ಅಸ್ತು ಎಂದಿದ್ದು, ಕೇಂದ್ರ ಸರ್ಕಾರ   ಆಧಾರ್​ ಕಾರ್ಡ್​ ಯೋಜನೆಗೆ ತಂದಿತ್ತು.
 ಕೆಲವೊಂದು ನಿರ್ಬಂಧವನ್ನು ವಿಧಿಸುವ ಮೂಲಕ ಸುಪ್ರೀಂಕೋರ್ಟ್ ಪಂಚ ನ್ಯಾಯಾಧೀಶರ ಪೀಠ ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿದೆ. ಅಲ್ಲದೇ ಖಾಸಗಿ ಸೌಲಭ್ಯಕ್ಕೆ ಆಧಾರ್ ಕಡ್ಡಾಯಲ್ಲ, ಸರ್ಕಾರಿ ಸೌಲಭ್ಯಗಳಿಗೆ ಮಾತ್ರ ಆಧಾರ್ ಸಂಖ್ಯೆ ಕಡ್ಡಾಯ ಎಂದು ಹೇಳುವ ಮೂಲಕ ಮಹತ್ವದ ತೀರ್ಪು ನೀಡಿದೆ.
aadhar card supreme court ಗೆ ಚಿತ್ರದ ಫಲಿತಾಂಶ
ಆಧಾರ್​ ಕಾರ್ಡ್​ ಮೊಬೈಲ್​ ಹಾಗೂ ಬ್ಯಾಂಕ್​ ಖಾತೆಗಳಿಗೆ ಅಗತ್ಯವಿಲ್ಲ, ಇನ್ನ ಆಧಾರ್​ನಿಂದ ಬಡವರ್ಗಕ್ಕೆ ಪ್ರಯೋಜನವಾಗುತ್ತದೆ, ಪಾನ್​ ಕಾರ್ಡ್​, ಐಟಿ ರಿಟರ್ನ್ಸ್​ಗೆ ಆಧಾರ್​ ಕಡ್ಡಾಯ ಎಂದು ಷರತ್ತುಗಳೊಂದಿಗೆ ಸುಪ್ರೀಂ ಕೋರ್ಟ್​ ಆಧಾರ್​ ಕಡ್ಡಾಯಗೊಳಿಸಿದೆ.

Leave a Reply

Your email address will not be published.