Cricket : ವೆಸ್ಟ್ ಇಂಡೀಸ್ ಮುಖ್ಯ ಕೋಚ್ ಹುದ್ದೆಗೆ ಸ್ಟುವರ್ಟ್ ಲಾ ರಾಜೀನಾಮೆ

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಸ್ಟುವರ್ಟ್ ಲಾ ರಾಜೀನಾಮೆ ನೀಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸಮನ್ ಸ್ಟುವರ್ಟ್ ಲಾ ಇಂಗ್ಲೆಂಡಿನ ಕೌಂಟಿ ಕ್ಲಬ್ ಮಿಡಲ್ ಸೆಕ್ಸ್ ತಂಡದೊಂದಿಗೆ 4 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮುಂದಿನ ವರ್ಷ ಜನೆವರಿಯಲ್ಲಿ ನಡೆಯಲಿರುವ ಬಾಂಗ್ಲಾ ಹಾಗೂ ಭಾರತ ತಂಡಗಳ ವಿರುದ್ಧದ ಸರಣಿಯ ನಂತರ ಸ್ಟುವರ್ಟ್ ಲಾ ಮಿಡಲ್ ಸೆಕ್ಸ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ..

‘ ವೆಸ್ಟ್ ಇಂಡೀಸ್ ತಂಡದ ಕೋಚ್ ಆಗಿ ಕಳೆದ ಸಮಯವನ್ನು ತುಂಬಾ ಎಂಜಾಯ್ ಮಾಡಿದ್ದೇನೆ. ವಿಂಡೀಸ್ ತಂಡದ ಆಟಗಾರರು ಹಾಗೂ ಸಿಬ್ಬಂದಿಗೆ ಯಶಸ್ಸು ಲಭಿಸಲಿ ಎಂದು ಶುಭ ಹಾರೈಸುತ್ತೇನೆ ‘ ಎಂದು ಸ್ಟುವರ್ಟ್ ಲಾ ಹೇಳಿದ್ದಾರೆ.

‘ ಮಿಡಲ್ ಸೆಕ್ಸ್ ತಂಡದ ಕೋಚ್ ಹುದ್ದೆಗೆ ಆಹ್ವಾನ ಬಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಮಿಡಲ್ ಸೆಕ್ಸ್ ತಂಡಕ್ಕೆ ಮಾರ್ಗದರ್ಶನ ಮಾಡುವುದು ಜಾಗತಿಕ ಕ್ರಿಕೆಟ್ ನಲ್ಲಿ ಕಠಿಣ ಕೆಲಸಗಳಲ್ಲಿ ಒಂದಾಗಿದೆ ‘ ಎಂದು ಸ್ಟುವರ್ಟ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com