ಎಚ್ಚರ..! ಪೆಟ್ರೋಲ್ ಬೆಲೆ ಸೆಂಚುರಿಗೆ ಇನ್ನು 10 ರೂಪಾಯಿ ಬಾಕಿ..!

ಅಚ್ಚೇದಿನ್ ಕನಸಿನಲ್ಲಿದ್ದ ಜನಸಾಮಾನ್ಯರ ಹಣೆಗೆ ಕೇಂದ್ರದ ಮೋದಿ ಸರ್ಕಾರ ಪೆಟ್ರೋಲ್ ಗನ್ ಇಟ್ಟಿದೆ. ಪೆಟ್ರೋಲ್ ಬೆಲೆ ಸೆಂಚುರಿಯತ್ತ ದಾಪುಗಾಲು ಹಾಕುತ್ತಿದ್ದು, 90 ರೂಪಾಯಿ ಗಡಿ ದಾಟಿದೆ.

ಸೋಮವಾರ ಮುಂಜಾನೆ ಮತ್ತೆ ತೈಲ ಬೆಲೆ ಮೇಲೇರಿದ್ದು ಮುಂಬೈನಲ್ಲಿ ಪೆಟ್ರೋಲ್ ಬೆಲೆ 90.08 ರೂ. ಆಗಿದ್ದರೆ, ಡೀಸೆಲ್ ಬೆಲೆ 78.58 ರೂ. ತಲುಪಿತ್ತು. ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ 82.72 ರೂ. ಹಾಗೂ ಡೀಸೆಲ್ ಬೆಲೆ 74.02 ರೂ. ಗೆ ಬಂದಿದೆ.

ಕಳೆದ ಐದು ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಕ್ರಮವಾಗಿ 4.66 ರೂ. ಹಾಗೂ 6.35 ರೂ.ನಷ್ಟು ಏರಿದೆ. ಕಳೆದ ವರ್ಷ ಜೂನ್‌ ಬಳಿಕ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಿಂಗಳಿಗೆ ಎರಡು ಬಾರಿ ತೈಲ ಬೆಲೆ ಪರಿಷ್ಕರಿಸುವ ಸಂಪ್ರದಾಯವನ್ನು ಕೈಬಿಟ್ಟು ಪ್ರತಿದಿನ ಪರಿಷ್ಕರಣೆ ನಡೆಸುತ್ತಿವೆ.

Leave a Reply

Your email address will not be published.

Social Media Auto Publish Powered By : XYZScripts.com