ಯಾರಿಗೂ ಸಚಿವ ಸ್ಥಾನ ಕೊಡಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ : ಡಿ.ಕೆ ಶಿವಕುಮಾರ್

‘ ಯಾರಿಗೂ ಸಚಿವ ಸ್ಥಾನ ಕೊಡಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ‘ ಎಂದು ರಾಜ್ಯ ಸರ್ಕಾರದ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಅತೃಪ್ತ ಕಾಂಗ್ರೆಸ್ ಶಾಸಕ ಎಂ.ಟಿ.ಬಿ ನಾಗರಾಜ್ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಕ್ಷೇತ್ರದ ವಿಚಾರಗಳ ಕುರಿತು ಚರ್ಚಿಸಲಾಯಿತು ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

‘ ಎಂ.ಟಿ.ಬಿ ನಾಗರಾಜ ಅವರು ಕ್ಷೇತ್ರದ ವಿಚಾರಗಳ ಕುರಿತು ಚರ್ಚೆ ಮಾಡಲು ನಮ್ಮ ಬಳಿ ಬಂದಿದ್ದರು. ಯಾರಿಗೂ ಸಚಿವ ಸ್ಥಾನ ಕೊಡಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನನಗೆ ಎಂಟಿಬಿ ನಾಗರಾಜ ಅವರ ಜೊತೆ ರಾಜಕೀಯಕ್ಕೆ ಹೊರತಾಗಿರುವ ಸ್ನೇಹ ಸಂಬಂಧ ಇದೆ. ರಾಜಕಾರಣದಲ್ಲಿ ಅಧಿಕಾರ ಬರುತ್ತೆ ಹೋಗುತ್ತೆ. ಆದರೆ ಸ್ನೇಹ ಆ ರೀತಿಯಲ್ಲ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com