ಅನುದಾನದ ವಿಚಾರದಲ್ಲಿ ಅಸಮಾಧಾನ ಇದೆ, ಸಚಿವ ಸ್ಥಾನದ ಬಗ್ಗೆ ಇಲ್ಲ : ಎಂ.ಟಿ.ಬಿ ನಾಗರಾಜ್

ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಅತೃಪ್ತ ಶಾಸಕ ಎಂ.ಟಿ ಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ. ‘ ನಾನು ಸಚಿವ ಸ್ಥಾನ ದ ಬಗ್ಗೆ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿಲ್ಲ. ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಬಳಿ ಚರ್ಚೆ ಆಗಿದೆ. ನಮ್ಮಲ್ಲಿ ಅನುಧಾನ ಮತ್ತು ಅಭಿವೃದ್ಧಿ ವಿಚಾರದಲ್ಲಿ ಅಸಮಾಧಾನ ಇದೆ. ಸಚಿವ ಸ್ಥಾನ ದ ಬಗ್ಗೆ ಅಸಮಾಧಾನ ಇಲ್ಲ. ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ವೇಣುಗೋಪಾಲ್ ಸಿದ್ದರಾಮಯ್ಯ ಭೇಟಿ ಮಾಡು ಅಂತ ಹೇಳಿದ್ರು ಭೇಟಿ ಮಾಡಿದೆ ‘ ಎಂದಿದ್ದಾರೆ.

ಸಿಎಂ ಹೆಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿದ ಕಾಂಗ್ರೆಸ್ ಅತೃಪ್ತ ಶಾಸಕ ಎಂ ಟಿ ಬಿ ನಾಗರಾಜ್ ಕ್ಷೇತ್ರಕ್ಕೆ ಅನುದಾನ ವಿಚಾರ ಸಂಬಂಧ ಸಿಎಂ ಮುಂದೆಯೂ ಅಸಮಧಾನ ಹೊರಹಾಕಿದ್ದಾರೆ. ಗೃಹ ಕಚೇರಿ ಕೃಷ್ಣದಲ್ಲಿ ಭೇಟಿ ಮಾಡಿ ಅಸಮಧಾನ ಹೊರಹಾಕಿದ ಎಂ ಟಿ ಬಿ ನಾಗರಾಜ್  ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಒತ್ತಾಯಿಸಿದ್ದಾರೆ.  ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಕುಮಾರಸ್ವಾಮಿ ‘ನಿಮ್ಮ ಕ್ಷೇತ್ರಕ್ಕೂ ಕೊಡ್ತೀನಿ ಅಣ್ಣ ಎಂದಿದ್ದಾರೆ.

Leave a Reply

Your email address will not be published.